ADVERTISEMENT

ಮೌಲ್ಯಮಾಪನ ರದ್ದತಿಗೆ ಸರ್ಕಾರ ತಡೆ

ಪಿಟಿಐ
Published 22 ಅಕ್ಟೋಬರ್ 2017, 19:30 IST
Last Updated 22 ಅಕ್ಟೋಬರ್ 2017, 19:30 IST

ನವದೆಹಲಿ: ಹೈಕೋರ್ಟ್‌ಗಳ ಹೆಚ್ಚುವರಿ ನ್ಯಾಯಮೂರ್ತಿಗಳನ್ನು ಕಾಯಂ ನ್ಯಾಯಮೂರ್ತಿಗಳ ಹುದ್ದೆಗೆ ಶಿಫಾರಸು ಮಾಡುವ ಮುನ್ನ ಅವರ ಮೌಲ್ಯಮಾಪನ ನಡೆಸುವ ಪದ್ಧತಿಗೆ ಕೊನೆ ಹಾಡುವ ಕೊಲಿಜಿಯಂನ ನಿರ್ಧಾರಕ್ಕೆ ಕೇಂದ್ರ ತಡೆಯೊಡ್ಡಿದೆ.

‘ಮೌಲ್ಯಮಾಪನ ಪದ್ಧತಿಯನ್ನು ರದ್ದುಪಡಿಸುವ ಕೊಲಿಜಿಯಂನ ನಿರ್ಧಾರಕ್ಕೆ ನಮ್ಮ ಸಹಮತವಿಲ್ಲ ಎಂದು ಕಾನೂನು ಸಚಿವಾಲಯ ಕೊಲಿಜಿಯಂಗೆ ತಿಳಿಸಿದೆ. ಇದು ಕೊಲಿಜಿಯಂ ಮತ್ತು ಸರ್ಕಾರದ ಮಧ್ಯೆ ಮತ್ತೆ ಜಟಾಪಟಿಗೆ ಕಾರಣವಾಗಬಹುದು’ ಎಂದು ಕಾನೂನು ಸಚಿವಾಲಯದ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT