ADVERTISEMENT

ಯುನೆಸ್ಕೊ ಪಟ್ಟಿಯಲ್ಲಿ ತಮಿಳುನಾಡಿನ 5 ತಾಣಗಳು

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2012, 19:30 IST
Last Updated 14 ಅಕ್ಟೋಬರ್ 2012, 19:30 IST

ಕುಂಬಕೋಣಂ (ಪಿಟಿಐ):  ವಿಶ್ವ ಪಾರಂಪರಿಕ ತಾಣದ ಮಾನ್ಯತೆಗಾಗಿ ಯುನೆಸ್ಕೊಗೆ ಕಳುಹಿಸಲು ಕೇಂದ್ರ ಸಂಸ್ಕೃತಿ ಸಚಿವಾಲಯ ಸಿದ್ಧಪಡಿಸಿರುವ ಪಟ್ಟಿಯಲ್ಲಿ ಶ್ರೀರಂಗದ ಪ್ರಸಿದ್ಧ ರಂಗನಾಥ ದೇವಾಲಯ ಸೇರಿದಂತೆ ತಮಿಳುನಾಡಿನ ಐದು ತಾಣಗಳ ಹೆಸರುಗಳಿವೆ ಎಂದು ಕೇಂದ್ರ ಸಂಸ್ಕೃತಿ ಸಚಿವೆ ಕುಮಾರಿ ಸೆಲ್ಜಾ ಹೇಳಿದ್ದಾರೆ.

ಚೆನ್ನೈಯಲ್ಲಿರುವ 17ನೇ ಶತಮಾನದ ಸೇಂಟ್ ಜಾರ್ಜ್ ಕೋಟೆ, ಚೆಟ್ಟಿನಾಡ್, ಕಳುಗುಮಲೆಯ ವಾಸ್ತುಶಿಲ್ಪಗಳು ಮತ್ತು ಪುಲಿಕಟ್ ಸರೋವರ ಈ ತಾತ್ಕಾಲಿಕ ಪಟ್ಟಿಯಲ್ಲಿ ಸ್ಥಾನ ಪಡೆದಿವೆ ಎಂದು ಸುದ್ದಿಗಾರರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.