ADVERTISEMENT

ಯುವತಿ ಮಾನಭಂಗ ಪ್ರಕರಣ: ಒಡಿಶಾದಲ್ಲಿ ಪ್ರಮುಖ ಆರೋಪಿ

​ಪ್ರಜಾವಾಣಿ ವಾರ್ತೆ
Published 16 ಜುಲೈ 2012, 19:30 IST
Last Updated 16 ಜುಲೈ 2012, 19:30 IST

ಗುವಾಹಟಿ (ಪಿಟಿಐ): ಯುವತಿಯ ಮಾನಭಂಗ ಪ್ರಕರಣದ ಪ್ರಮುಖ ಆರೋಪಿಯು ಒಡಿಶಾದ ಭುವನೇಶ್ವರದಲ್ಲಿದ್ದು, ಇನ್ನೂ ಆತನನ್ನು ಬಂಧಿಸಿಲ್ಲ ಎಂದು ಮುಖ್ಯಮಂತ್ರಿ ತರುಣ್ ಗೊಗೊಯ್ ತಿಳಿಸಿದ್ದಾರೆ.

ಪ್ರಕರಣದ ಮೊದಲ ಮತ್ತು ಪ್ರಮುಖ ಆರೋಪಿ ಅಮರಜ್ಯೋತಿ ಕಲಿತ್ತನ ಮೊಬೈಲ್ ಸಂಭಾಷಣೆಯನ್ನು ಆಲಿಸಿದ್ದು, ಆತ ಭುವನೇಶ್ವರದಲ್ಲಿರುವುದು ತಿಳಿದು ಬಂದಿದೆ. ಈತನನ್ನು ಬಂಧಿಸಲು, ರಾಜ್ಯದ ಪೊಲೀಸರು ಒಡಿಶಾ ಪೊಲೀಸರೊಂದಿಗೆ ಸಂಪರ್ಕ ಸಾಧಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಮೊದಲ ಆರೋಪಿ ಮತ್ತು ಇತರ ಆರೋಪಿಗಳ ಬಗ್ಗೆ ಸುಳಿವು ನೀಡಿದವರಿಗೆ ಒಂದು ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಪೊಲೀಸರು ಘೋಷಿಸಿದ್ದಾರೆ.
 
ಮಾಧ್ಯಮಗಳ ವರ್ತನೆಗೆ ಖಂಡನೆ:   ಪ್ರಕರಣದಲ್ಲಿ ಸ್ಥಳೀಯ ಮಾಧ್ಯಮ ಪ್ರತಿನಿಧಿಗಳು ಅನುಸರಿಸಿದ ಧೋರಣೆಯನ್ನು ಮುಖ್ಯಮಂತ್ರಿ ತರುಣ್ ಗೊಗೊಯ್ ಖಂಡಿಸಿದ್ದು, `ಇದು  ನೀತಿಗೆಟ್ಟ ನಡವಳಿಕೆ~ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.