ADVERTISEMENT

ರಸ್ತೆ ಮೂಲಕ ತೈಲ ಸಾಗಣೆಗೆ ಅವಕಾಶ -ಪಾಕ್‌ಗೆ ಮನವಿ

​ಪ್ರಜಾವಾಣಿ ವಾರ್ತೆ
Published 18 ಜುಲೈ 2012, 19:30 IST
Last Updated 18 ಜುಲೈ 2012, 19:30 IST

ನವದೆಹಲಿ (ಪಿಟಿಐ): ಪೆಟ್ರೋಲ್ ಮತ್ತು ಡೀಸೆಲ್‌ನ್ನು ರಸ್ತೆ ಮಾರ್ಗದ ಮೂಲಕ ಸಾಗಿಸಲು ಅವಕಾಶ ನೀಡಬೇಕು ಎಂದು ಭಾರತದ ಬುಧವಾರ ಪಾಕಿಸ್ತಾನಕ್ಕೆ ಮನವಿ ಮಾಡಿದೆ.

ಇದರ ಜೊತೆಗೆ ತೈಲ ಸಾಗಣೆಗಾಗಿ ಲಾಹೋರ್‌ವರೆಗೆ ಶಾಶ್ವತ ಕೊಳವೆ ಮಾರ್ಗ ನಿರ್ಮಿಸುವ ಪ್ರಸ್ತಾವನೆಯನ್ನೂ ಮುಂದಿಟ್ಟಿದೆ. ಇಂಧನ ಕೊರತೆ ಎದುರಿಸುತ್ತಿರುವ ಪಾಕಿಸ್ತಾನವು ಈ ವರ್ಷದ ಮಾರ್ಚ್ ತಿಂಗಳಲ್ಲಿ ಭಾರತ ಆಮದು ಮಾಡುವ ವಸ್ತುಗಳ ಮೇಲೆ ನಿಷೇಧ ಹೇರಿರುವ ಪಟ್ಟಿಯಿಂದ ಪೆಟ್ರೋಲ್‌ನ್ನು ತೆಗೆದುಹಾಕಿತ್ತು.

ಆದಾಗ್ಯೂ, ಕೇವಲ ಸಮುದ್ರ ಮಾರ್ಗದ ಮೂಲಕ ಪೆಟ್ರೋಲ್‌ನ್ನು ಆಮದು ಮಾಡಿಕೊಳ್ಳಲು ಅದು ಭಾರತಕ್ಕೆ ಅವಕಾಶ ನೀಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.