ಚಂಡೀಗಡ (ಪಿಟಿಐ): ಪಂಜಾಬ್ ಚುನಾವಣೆಯಲ್ಲಿ ಕಾಂಗ್ರೆಸ್ ಹಿನ್ನಡೆ ಅನುಭವಿಸಿದ್ದರೂ ತಾವು ಮಾತ್ರ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವುದಿಲ್ಲ ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಅಮರಿಂದರ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.
ಪಕ್ಷವನ್ನು ಜಯದತ್ತ ಕೊಂಡೊಯ್ದ ಬಳಿಕವಷ್ಟೇ ರಾಜೀನಾಮೆ ಸಲ್ಲಿಸುವ ಅಥವಾ ನಿವೃತ್ತರಾಗ ಬಯಸಿರುವುದಾಗಿ ಹೇಳಿದ್ದಾರೆ. `ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರು ಈಗಾಗಲೇ ನೋವಿನಲ್ಲಿದ್ದಾರೆ. ಅಂತಹುದೇ ಸ್ಥಿತಿ ಮುಂದುವರಿಯುವ ಆತಂಕ ಎದುರಿಸುತ್ತಿರುವ ಅವರನ್ನು ಈ ಸಂದರ್ಭದಲ್ಲಿ ನಾನು ಕೈಬಿಡಲಾರೆ~ ಎಂದಿದ್ದಾರೆ.
ಬಿಜೆಪಿ ಆಯ್ಕೆ: ಚುನ್ನಿ ಲಾಲ್ ಭಗತ್ ಅವರು ಶುಕ್ರವಾರ ಬಿಜೆಪಿ ಶಾಸಕಾಂಗ ಪಕ್ಷದ ಮುಖ್ಯಸ್ಥರಾಗಿ ಒಮ್ಮತದಿಂದ ಆಯ್ಕೆಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.