ADVERTISEMENT

ರೆಡ್ಡಿದ್ವಯರ ಜಾಮೀನು ಅರ್ಜಿ ವಿಚಾರಣೆ ಇಂದು

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2011, 19:30 IST
Last Updated 8 ಸೆಪ್ಟೆಂಬರ್ 2011, 19:30 IST

ಹೈದರಾಬಾದ್: ದೆಹಲಿ ಹೈಕೋರ್ಟ್ ಬಳಿ ಬಾಂಬ್ ಸ್ಫೋಟ ಘಟನೆ ಖಂಡಿಸಿ ವಕೀಲರು ಕಲಾಪ ಬಹಿಷ್ಕರಿಸಿದ್ದರಿಂದ ಅಕ್ರಮ ಗಣಿ ಚಟುವಟಿಕೆ ಆರೋಪದಡಿ ಸಿಬಿಐ ನಿಂದ ಬಂಧಿತರಾಗಿರುವ ಓಬಳಾಪುರಂ ಕಂಪೆನಿ ಮಾಲಿಕ ಗಾಲಿ ಜನಾರ್ದನ ರೆಡ್ಡಿ ಮತ್ತು ವ್ಯವಸ್ಥಾಪಕ ನಿರ್ದೇಶಕ ಬಿ.ವಿ.ಶ್ರೀನಿವಾಸ ರೆಡ್ಡಿ ಅವರು ಜಾಮೀನು ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆ ಶುಕ್ರವಾರಕ್ಕೆ ಮುಂದೂಡಿಕೆಯಾಗಿದೆ.

ಈ ಮುಂಚೆ ನಿಗದಿಯಾಗಿದ್ದಂತೆ ಗುರುವಾರವೇ ಈ ಅರ್ಜಿಗಳ ವಿಚಾರಣೆ ನಡೆಯಬೇಕಿತ್ತು. ಹೆಚ್ಚಿನ ತನಿಖೆಗಾಗಿ ಆರೋಪಿಗಳನ್ನು ಎರಡು ವಾರಗಳ ಕಾಲ ತನ್ನ ವಶಕ್ಕೆ ನೀಡಲು ಕೋರಿ ಸಿಬಿಐ ಸಲ್ಲಿಸಿರುವ ವಿಚಾರಣೆ ಕೂಡ ಗುರುವಾರ ನಡೆಯಬೇಕಿತ್ತು.

ಆರೋಪಿಗಳ ಪರ ಕಿರಿಯ ವಕೀಲೆ ಎನ್.ಅನುಪಮಾ ಗುರುವಾರ ನ್ಯಾಯಾಧೀಶರ ಮುಂದೆ ಹಾಜರಾಗಿದ್ದರು. ತಮ್ಮ ಹಿರಿಯ ವಕೀಲರು ಶುಕ್ರವಾರ ನವದೆಹಲಿಯಲ್ಲಿ ಸುಪ್ರೀಂಕೋರ್ಟ್‌ಗೆ ಹಾಜರಾಗಬೇಕಿರುವುದರಿಂದ  ಜಾಮೀನು ಅರ್ಜಿಗಳ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಲು ಕೋರಿದರು. ಆದರೆ ನ್ಯಾಯಾಲಯ ಇದಕ್ಕೆ ಒಪ್ಪದೇ ಶುಕ್ರವಾರವೇ ವಿಚಾರಣೆ ನಡೆಸುವುದಾಗಿ  ತಿಳಿಸಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.