ADVERTISEMENT

ರೈಲುಗಳಲ್ಲಿ ಹೈಸ್ಪೀಡ್‌ ಇಂಟರ್‌ನೆಟ್‌: ಹಳಿ ನಿರ್ವಹಣೆಗೂ ಅನುಕೂಲ

ಪಿಟಿಐ
Published 18 ಜೂನ್ 2017, 19:30 IST
Last Updated 18 ಜೂನ್ 2017, 19:30 IST
ರೈಲುಗಳಲ್ಲಿ ಹೈಸ್ಪೀಡ್‌ ಇಂಟರ್‌ನೆಟ್‌: ಹಳಿ ನಿರ್ವಹಣೆಗೂ ಅನುಕೂಲ
ರೈಲುಗಳಲ್ಲಿ ಹೈಸ್ಪೀಡ್‌ ಇಂಟರ್‌ನೆಟ್‌: ಹಳಿ ನಿರ್ವಹಣೆಗೂ ಅನುಕೂಲ   

ನವದೆಹಲಿ: ರೈಲುಗಳಲ್ಲಿ ಪ್ರಯಾಣಿಸುವವರಿಗೆ ಇನ್ನು ಮುಂದೆ ತಡೆರಹಿತ ಇಂಟರ್‌ನೆಟ್‌ ಸೌಲಭ್ಯ ದೊರೆಯಲಿದೆ. ಪ್ರಮುಖ ಮಾರ್ಗಗಳಲ್ಲಿ ಸಂಚರಿಸುವ ರೈಲುಗಳಲ್ಲಿ ಹೈಸ್ಪೀಡ್ ಮೊಬೈಲ್‌ ಸಂವಹನ ವ್ಯವಸ್ಥೆಯನ್ನು ಅಳವಡಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ.

ಈ ಸೌಲಭ್ಯವು ರೈಲು ಹಳಿಯ ಸ್ಥಿತಿಗತಿಯ ಬಗ್ಗೆ ಗ್ಯಾಂಗ್‌ಮನ್‌, ಲೋಕೊ ಪೈಲಟ್‌ ಮತ್ತು ಸ್ಟೇಷನ್‌ ಮಾಸ್ಟರ್‌ ನಡುವೆ ಮಾಹಿತಿ ಹಂಚಿಕೊಳ್ಳಲು ಸಹ ನೆರವಾಗಲಿದೆ. ಇದರಿಂದ ಹಳಿಯ ನಿರ್ವಹಣೆಗೆ ಅನುಕೂಲವಾಗಲಿದೆ.

ರೈಲುಗಳ ಕಾರ್ಯಾಚರಣೆಯಲ್ಲಿ ಬದಲಾವಣೆ ತರಲು ಈ ಸಂವಹನ ವ್ಯವಸ್ಥೆ ನೆರವಾಗಲಿದೆ ಎನ್ನಲಾಗಿದೆ. ಸದ್ಯ ರೈಲುಗಳ ಕಾರ್ಯಾಚರಣೆಗೆ  ವೈರ್‌ಲೆಸ್‌ ಉಪಕರಣಗಳನ್ನು ಬಳಸಲಾಗುತ್ತಿದೆ. ರೈಲುಗಳ ಚಾಲಕರು ಮತ್ತು ನಿಲ್ದಾಣಗಳಲ್ಲಿನ ನಿಯಂತ್ರಕರ ಧ್ವನಿ ಸಂವಹನಕ್ಕೆ ಕೆಲವು ಆಯ್ದ ಮಾರ್ಗಗಳಲ್ಲಿ  ಜಿಎಸ್‌ಎಂ–ಆರ್‌ ನೆಟ್‌ವರ್ಕ್‌ ಅನ್ನು  ಅನುಷ್ಠಾನಗೊಳಿಸಲಾಗಿದೆ.

ADVERTISEMENT

‘ಇನ್ನು ಮುಂದೆ ಎಲ್‌ಟಿಇ–ಆರ್‌ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ನಿರ್ಧರಿಸಲಾಗಿದೆ. ಇದರಿಂದ ಹೈಸ್ಪೀಡ್‌ ರೈಲುಗಳ ಸಂವಹನ ಕಾರಿಡಾರ್‌ ಸಾಧ್ಯವಾಗಲಿದೆ’ ಎಂದು ರೈಲ್ವೆ ಸಚಿವಾಲಯದ  ಸಿಗ್ನಲ್‌ ಮತ್ತು ಟೆಲಿಕಾಂ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹೈಸ್ಪೀಡ್‌ ಸಂವಹನ ಕಾರಿಡಾರ್‌ ಸೌಲಭ್ಯವು ರೈಲುಗಳ ಭದ್ರತೆಗೂ ಸಹಕಾರಿಯಾಗಲಿದೆ.

**

ಅಂಕಿ ಅಂಶ

₹5000ಕೋಟಿ: ಹೈಸ್ಪೀಡ್‌ ಮೊಬೈಲ್‌ ಸಂವಹನ ಕಾರಿಡಾರ್‌ಗೆ ಖರ್ಚು ಮಾಡಲಿರುವ ಹಣ

2541ಕಿ.ಮೀ: ಮಾರ್ಗದಲ್ಲಿ ರೈಲ್ವೆ ಇಲಾಖೆ ರೇಡಿಯೊ ಸಂವಹನ ವ್ಯವಸ್ಥೆ ಅನುಷ್ಠಾನಗೊಳಿಸಿದೆ

3,408: ಮಾರ್ಗದಲ್ಲಿ ಈ ವ್ಯವಸ್ಥೆ ಜಾರಿಗೆ ಸಿದ್ಧತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.