ADVERTISEMENT

ಲಂಡನ್‌ನಲ್ಲಿ ಹರಾಜು : ರೋರಿಚ್ ಕಲಾಕೃತಿ ಕಳವು

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2011, 19:30 IST
Last Updated 9 ಅಕ್ಟೋಬರ್ 2011, 19:30 IST

ನವದೆಹಲಿ, (ಪಿಟಿಐ): ರಷ್ಯ ಕಲಾವಿದ ನಿಕೋಲಸ್ ರೋರಿಚ್ ಅವರ ಎರಡು ಬೆಲೆಬಾಳುವ ಕಲಾಕೃತಿಗಳು ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಿಂದ (ಐಎಆರ್‌ಐ) ಕಳುವಾಗಿದ್ದು ಲಂಡನ್‌ನಲ್ಲಿ ಹರಾಜಾಗಿವೆ ಎಂದು ಹೇಳಿರುವ ಸಿಬಿಐ, ಈ ಕುರಿತು ಇಂಟರ್‌ಪೋಲ್‌ಗೆ ಎಚ್ಚರಿಕೆ ನೀಡಿದೆ.

ಕಳೆದ ತಿಂಗಳು ಸಿಬಿಐ ಪ್ರಕರಣ ದಾಖಲಿಸಿಕೊಂಡಿದ್ದು, ಸಂಸ್ಥೆಯ ಸಿಬ್ಬಂದಿಯನ್ನು ಪ್ರಶ್ನಿಸುತ್ತಿದೆ. ಈ ಕಲಾಕೃತಿಗಳಲ್ಲಿ ಹಿಮಾಲಯವನ್ನು ಚಿತ್ರಿಸಲಾಗಿದೆ. ಇವು ಕಲಾವಿದ ರೋರಿಚ್ ಅವರು ಭಾರತಕ್ಕೆ 1923ಕ್ಕೆ ಬಂದ ಸಂದರ್ಭದಲ್ಲಿನ ಆರಂಭಿಕ ಕಲಾಕೃತಿಗಳಾಗಿವೆ. ರೋರಿಚ್ 1947ರಲ್ಲಿ ಮೃತರಾಗುವವರೆಗೂ ಭಾರತದಲ್ಲೇ ಉಳಿದುಕೊಂಡಿದ್ದರು.
 
ಈ ಕಳೆದು ಹೋದ ಕಲಾಕೃತಿಗಳು ಇಪ್ಪತ್ತು ಲಕ್ಷ ಡಾಲರ್‌ಗೆ ಹರಾಜಾಗಿದ್ದು, ಅವು ಕಳುವಾದ ಬಗ್ಗೆ ಸಂಸ್ಥೆ ಸಿಬಿಐಗೆ ದೂರು ನೀಡಿತ್ತು. ಲಂಡನ್ ಅನ್ನು ಕಲಾಕೃತಿಗಳು ಹೇಗೆ ತಲುಪಿದವು ಹಾಗೂ ಕಳುವಿನಲ್ಲಿ ಭಾಗಿಯಾದವರು ಯಾರು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಅಲ್ಲದೆ ಕಲಾಕೃತಿಗಳನ್ನು ಭಾರತಕ್ಕೆ ಮರಳಿ ತರಲು ಪ್ರಯತ್ನಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.