ADVERTISEMENT

ಲಿಬಿಯಾ: ಸ್ವದೇಶಕ್ಕೆ ಮರಳಿದ 500 ಭಾರತೀಯರು

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2011, 12:55 IST
Last Updated 27 ಫೆಬ್ರುವರಿ 2011, 12:55 IST

ನವದೆಹಲಿ(ಐಎಎನ್ಎಸ್): ಲಿಬಿಯದಲ್ಲಿ ಸರ್ವಾಧಿಕಾರಿ ಮುಅಮ್ಮರ್ ಗಡಾಫಿ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯು ತೀವ್ರವಾಗಿದ್ದು, ಈ ಹಿನ್ನೆಲೆಯಲ್ಲಿ ಅಲ್ಲಿ ನೆಲಸಿದ್ದ 500 ಕ್ಕೂ ಅಧಿಕ ಭಾರತೀಯರು ಎರಡು ವಿಶೇಷ ಏರ್ ಇಂಡಿಯಾ ವಿಮಾನಗಳಲ್ಲಿ ಭಾನುವಾರ ಸ್ವದೇಶಕ್ಕೆ ಮರಳಿದ್ದಾರೆ.

ಕಳೆದ ಹಲವು ದಿನಗಳಿಂದ ಅಲ್ಲಿನ ಪರಿಸ್ಥಿತಿ ತುಂಬ ಹದಗೆಟ್ಟಿದೆ. ಭಾರತೀಯರು ಆಹಾರ ಹಾಗೂ ನೀರಿನ ಕೊರತೆಯನ್ನು ಅನುಭವಿಸುತ್ತಿದ್ದಾರೆ. ನಾವೂ ಕೂಡ ಸಾಕಷ್ಟ ತೊಂದರೆಯನ್ನು ಅನುಭವಿಸಬೇಕಾಯಿತು  ಎಂದು   ಲಿಬಿಯಾದಿಂದ  ಹಿಂದಿರುಗಿದ ಮೊಬಿನ್ ಕುರೆಶಿ ಸೇರಿದಂತೆ ಹಲವರು ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ.

ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಅಹಮ್ಮದ್ ಮತ್ತು ವಿದೇಶಾಂಗ ಕಾರ್ಯದರ್ಶಿ ನಿರುಪಮರಾವ್ ಅವರನ್ನು ಬರಮಾಡಿಕೊಂಡರು.

ADVERTISEMENT

291 ಭಾರತೀಯರನ್ನು ಹೊತ್ತ  ಬೊಯಿಂಗ್ 747 ಮೊದಲನೇ ವಿಮಾನ ಶನಿವಾರ ಮಧ್ಯರಾತ್ರಿ  ಇಲ್ಲಿಗೆ ಆಗಮಿಸಿತ್ತು. ಭಾನುವಾರ ಮುಂಜಾನೆ 4.10ರ ಸುಮಾರಿಗೆ 237 ಪ್ರಯಾಣಿಕರಿದ್ದ A330 ಎರಡನೇ ವಿಮಾನ  ಬಂದಿಳಿಯುತ್ತಿದ್ದಂತೆ  ಇವರ ಆಗಮನಕ್ಕಾಗಿ ಕಾಯುತ್ತಿದ್ದ ಸಂಬಂಧಿಕರಲ್ಲಿದ್ದ ಆತಂಕ ದೂರವಾಗಿ ಅವರನ್ನು ತಬ್ಬಿ ಸಂಭ್ರಮಿಸಿದರು.

ಇನ್ನೊಂದೆಡೆ 500 ಭಾರತೀಯರಿರುವ ಏರ್ ಇಂಡಿಯಾ ವಿಮಾನ ಟ್ರಿಪೋಲಿಯಿಂದ ಈಗಾಗಲೇ ನಿರ್ಗಮಿಸಿದೆ.  ಮತ್ತೊಂದೆಡೆ 67 ಭಾರತೀಯ ಪ್ರಯಾಣಿಕರಿರುವ ಗಾಲ್ಪ್ ಏರ್ ವಿಮಾನವು ಈಜಿಪ್ಟ್ ಪ್ರವೇಶಿಸಿದ್ದು ಸೋಮವಾರ ಬೆಳಿಗ್ಗೆ ಮುಂಬೈ ತಲುಪುವ ನಿರೀಕ್ಷೆಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.