‘ಲಖನೌ (ಪಿಟಿಐ): ಜನ ಲೋಕಪಾಲ ಮಸೂದೆ ಕರಡು ಮಸೂದೆ ಸಮಿತಿಯಲ್ಲಿ ದಲಿತ ಮತ್ತು ಆದಿವಾಸಿ ಸಮುದಾಯದ ಇಬ್ಬರನ್ನು ಸೇರಿಸುವಂತೆ ರಿಪಬ್ಲಿಕನ್ ಪಕ್ಷ ಪ್ರಧಾನಿಯವರನ್ನು ಕೋರಿದೆ.
‘ಲೋಕಪಾಲ ಮಸೂದೆ ಕರಡು ಸಮಿತಿಯಲ್ಲಿ ದಲಿತ ಮತ್ತು ಆದಿವಾಸಿ ಸಮುದಾಯದ ಇಬ್ಬರು ಪ್ರತಿನಿಧಿಗಳನ್ನು ಸೇರಿಸಬೇಕೆಂದು ನಾನು ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಸಮಿತಿ ಅಧ್ಯಕ್ಷ ಪ್ರಣಬ್ ಮುಖರ್ಜಿ ಅವರಿಗೆ ಪತ್ರ ಬರೆದಿದ್ದೇನೆ’ ಎಂದು ಪಕ್ಷದ ಮುಖ್ಯಸ್ಥ ರಾಮದಾಸ್ ಅತಾವಲೆ ವರದಿಗಾರರಿಗೆ ತಿಳಿಸಿದರು.
ಕಪ್ಪು ಹಣ ಹೊಂದಿರುವ ಬಾಬಾ ರಾಮ್‌ದೇವ್, ಸಿನಿಮಾ ನಟರ ಬೆಂಬಲವನ್ನು ಅಣ್ಣಾ ಹಜಾರೆ ಪಡೆಯಬಾರದು ಎಂದು ಅವರು ಅಭಿಪ್ರಾಯಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.