ADVERTISEMENT

ವಯಸ್ಸಿನ ಮಿತಿ ರದ್ದು

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2012, 19:30 IST
Last Updated 22 ಫೆಬ್ರುವರಿ 2012, 19:30 IST

ನವದೆಹಲಿ (ಪಿಟಿಐ): ಕೇಂದ್ರ ಸರ್ಕಾರಿ ನೌಕರರ ಮಕ್ಕಳ ಶಿಕ್ಷಣ ಭತ್ಯೆಗೆ ನಿಗದಿಪಡಿಸಿದ್ದ ಕನಿಷ್ಠ 5 ವರ್ಷ ವಯಸ್ಸಿನ ಮಿತಿಯನ್ನು ತೆಗೆದು ಹಾಕಲು ನಿರ್ಧರಿಸಿದೆ.

ಇದರಿಂದ ಲಕ್ಷಾಂತರ ನೌಕರರು ಲಾಭ ಪಡೆಯಲಿದ್ದಾರೆ. ಹಲವಾರು ಅಹವಾಲು ಸ್ವೀಕರಿಸಿದ ಬಳಿಕ ಸರ್ಕಾರ ಈ ನಿರ್ಧಾರ ಕೈಗೊಂಡಿದ್ದು, ಹಣಕಾಸು ಸಚಿವಾಲಯದ ಪರಿಶೀಲನೆ ನಂತರ ಇದು ಜಾರಿಗೆ ಬರಲಿದೆ.

ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಈ ಬಗ್ಗೆ ಎಲ್ಲ ಸಚಿವಾಲಯಗಳು ಮತ್ತು ಇಲಾಖೆಗಳಿಗೆ ಪತ್ರ ಬರೆದಿದ್ದು, ಮಕ್ಕಳ ಭತ್ಯೆ, ಹಾಸ್ಟೆಲ್ ವೆಚ್ಚ ಮರುಪಾವತಿಗೆ ಯಾವುದೇ ಕನಿಷ್ಠ ವಯೋಮಿತಿ ಇಲ್ಲ ಎಂದು ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.