ADVERTISEMENT

ವರ್ಷಾಂತ್ಯಕ್ಕೆ ಸಲ್ಮಾನ್‌ ಮದುವೆ?

‘ಒಂಟಿ ಜೀವನ ಸಾಕಾಗಿದೆ: ಬದಲಾವಣೆ ಕಾಲಬಂದಿದೆ’

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2014, 19:30 IST
Last Updated 9 ಮಾರ್ಚ್ 2014, 19:30 IST

ನವದೆಹಲಿ (ಪಿಟಿಐ): ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ತಮಗೆ ಒಂಟಿ ಜೀವನ ಸಾಕಾಗಿದೆ ಎಂದು ಹೇಳುವ ಮೂಲಕ ವರ್ಷಾಂತ್ಯದಲ್ಲಿ ಮದುವೆಯಾಗುವ ಸೂಚನೆ ನೀಡಿದ್ದಾರೆ.

2014 ರ ಇಂಡಿಯಾ ಟುಡೇ ಸಮಾವೇಶದಲ್ಲಿ ಮಾತನಾಡಿದ ನಟ ಸಲ್ಮಾನ್‌ ಖಾನ್‌,  ಬಹುದಿನಗಳ  ಗೆಳತಿ ರುಮೇನಿಯಾದ ಇಲಿಯಾ ವಂತೂರ್‌ ಅವರನ್ನು ಮದುವೆಯಾಗುವ ಸಂಬಂಧ ಪ್ರಶ್ನೆಗಳು ಬಂದಾಗ ಆ ವಿಷಯವನ್ನು ತಳ್ಳಿಹಾಕಿಲ್ಲ.

‘ನಾನೀಗ ಬದಲಾವಣೆಯ ಕಾಲಘಟ್ಟದಲ್ಲಿದ್ದೇನೆ ಬಹುಬೇಗ ನನ್ನ ಜೀವನದಲ್ಲಿ ಹೊಸ ಗಳಿಗೆ ಬರಲಿದೆ’ ಎಂದು ಹೇಳಿದ್ದಾರೆ.

ನಾನು ಮುನುಷ್ಯ ಧರ್ಮ, ಮುಸ್ಲಿಂ ಧರ್ಮ, ಕ್ರಿಶ್ಚಿಯನ್‌ ಧರ್ಮ ಎಲ್ಲವನ್ನೂ ಪಾಲಿಸುತ್ತೇನೆ. ನನ್ನ ತಂದೆ ಪಠಾಣ್‌, ತಾಯಿ ಹಿಂದು, ಚಿಕ್ಕಮ್ಮ ಕ್ಯಾಥೋಲಿಕ್‌, ಸಹೋದರಿಯ ಪತಿ ಪಂಜಾಬಿ, ಹೆಂಡತಿ...... ಹೊರಗಿನಿಂದ ಬಂದವರಾಗಿರಲಿ ಎಂದು ಸಲ್ಮಾನ್‌ ಹೇಳಿದ್ದಾರೆ.

‘ಮಾಜಿ ಗೆಳತಿಯರು ನನಗೆ ನೀನು ಒಳ್ಳೆಯ ಪ್ರೇಮಿಯಲ್ಲ, ಆದರೆ ಒಳ್ಳೆಯ ಸ್ನೇಹಿತ ಎಂದು ಹೇಳಿದ್ದಾರೆ’ ಎಂದು ಸಲ್ಮಾನ್‌ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.