ನವದೆಹಲಿ (ಐಎಎನ್‌ಎಸ್):ಭಾರತೀಯ ವಾಯುಪಡೆಗೆ ಸೇರಿದ ಮಿರಾಜ್-2000 ತರಬೇತಿ ಯುದ್ಧ ವಿಮಾನ ಸೋಮವಾರ ರಾಜಸ್ತಾನದಲ್ಲಿ ಅಪಘಾತಕ್ಕೀಡಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಎಂದಿನಂತೆ ಮಧ್ಯ ಪ್ರದೇಶದ ಗ್ವಾಲಿಯರ್‌ನಿಂದ ಹಾರಾಟ ನಡೆಸಿದ ವಿಮಾನವು ಮಧ್ಯಾಹ್ನ 12.45ಕ್ಕೆ ಜೈಪುರ ಸಮೀಪದ ಸವಾಯ್ ಮಾಧೋಪುರ್ ಬಳಿ ದುರಂತಕ್ಕೀಡಾಗಿದೆ. ವಿಮಾನದ ಇಬ್ಬರು ಚಾಲಕರು ಸುರಕ್ಷಿತವಾಗಿದ್ದಾರೆ ಎಂದು ವಾಯುಪಡೆಯ ಮೂಲಗಳು ತಿಳಿಸಿವೆ.
ಕಳೆದ ಹತ್ತು ದಿನಗಳ ಅವಧಿಯಲ್ಲಿ ಅಪಘಾತಕ್ಕೀಡಾದ ಎರಡನೇ ಮಿರಾಜ್ ವಿಮಾನ ಇದಾಗಿದ್ದು, ಫೆಬ್ರುವರಿ 24ರಂದು ಮಿರಾಜ್-2000 ವಿಮಾನ ನೆಲಕ್ಕಪ್ಪಳಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.