
ಪ್ರಜಾವಾಣಿ ವಾರ್ತೆನವದೆಹಲಿ (ಪಿಟಿಐ): ಪ್ರತಿಭಾ ಪಾಟೀಲ್ ಅವರು ವಿದೇಶ ಪ್ರವಾಸಗಳಿಗೆ 205 ಕೋಟಿ ರೂಪಾಯಿ ಖರ್ಚು ಮಾಡಿರುವುದನ್ನು ಸಮರ್ಥಿಸಿಕೊಂಡಿರುವ ರಾಷ್ಟ್ರಪತಿ ಭವನವು `ಈ ವಿಷಯದಲ್ಲಿ ಹಿಂದಿನ ರಾಷ್ಟ್ರಪತಿಗಳ ಜತೆ ಹೋಲಿಕೆ ಅಪ್ರಸ್ತುತ~ ಎಂದು ಸೋಮವಾರ ಹೇಳಿದೆ.
ದೇಶದ ಚಿತ್ರಣ ಬದಲಾಗಿದೆ. ಹಾಗಾಗಿ ರಾಷ್ಟ್ರಪತಿ ಅನೇಕ ಬಾರಿ ವಿದೇಶ ಪ್ರವಾಸ ಮಾಡಬೇಕಾಗುತ್ತದೆ. ವಿದೇಶಿ ಗಣ್ಯ ವ್ಯಕ್ತಿಗಳು ಭಾರತಕ್ಕೆ ಭೇಟಿ ನೀಡುವುದೂ ಹೆಚ್ಚುತ್ತಿದೆ. ಆದ್ದರಿಂದ ಪ್ರವಾಸದ ಖರ್ಚನ್ನು ಅಳೆಯುವುದು ಸರಿಯಲ್ಲ ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.