ADVERTISEMENT

ವಿವರ ಬಹಿರಂಗಕ್ಕೆ ನಕಾರ

2002 ಗುಜರಾತ್‌ ಗಲಭೆ: ವಾಜಪೇಯಿ –ಮೋದಿ ಪತ್ರ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2013, 19:30 IST
Last Updated 15 ಡಿಸೆಂಬರ್ 2013, 19:30 IST

ನವದೆಹಲಿ (ಪಿಟಿಐ): ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಮತ್ತು ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿ ನಡುವೆ 2002ರ ಗುಜರಾತ್‌ ಗಲಭೆ ಸಂದರ್ಭದಲ್ಲಿ ನಡೆದಿರುವ ಪತ್ರ ವ್ಯವಹಾರವನ್ನು ಬಹಿರಂಗ­ಪಡಿಸಲು ಪ್ರಧಾನಿ ಕಾರ್ಯಾ­ಲಯ(ಪಿಎಂಒ) ನಿರಾಕರಿಸಿದೆ.

ತಪ್ಪಿತಸ್ಥರ ತನಿಖೆ, ಬಂಧನ ಅಥವಾ ವಿಚಾರಣೆ ಪ್ರಕ್ರಿಯೆಗೆ ಅಡ್ಡಿಯಾಗು­ವಂ­ತಿದ್ದರೆ ಮಾಹಿತಿ ಬಹಿರಂಗಪಡಿಸ­ದಿ­ರಲು ಅವಕಾಶ ಇದೆ ಎಂದು ಪಾರದರ್ಶಕತೆ ಕಾಯ್ದೆಯ 8 (1) ಎಚ್‌ ಸೆಕ್ಷನನ್ನು ಉಲ್ಲೇಖಿಸಿ ಪಿಎಂಒ ಈ ಮಾಹಿತಿ ಕೇಳಿರುವ ಮಾಹಿತಿ ಹಕ್ಕು ಅರ್ಜಿಗೆ ಪ್ರತಿಕ್ರಿಯೆ ನೀಡಿದೆ.

ಪಿಎಂಒ ಈ ಪ್ರತಿ­ಕ್ರಿಯೆ, ವಾಜಪೇಯಿ ಮತ್ತು ಮೋದಿ ನಡು­ವಿನ ಸಂವಹನ­ದಲ್ಲಿ ಗಲಭೆಗೆ ಸಂಬಂ­ಧಿ­ಸಿದ ಅಥವಾ ಗಲಭೆಯ ಹಿಂದಿನ ಜನಗಳ ಬಗ್ಗೆ ಮಾಹಿತಿ ಇರ­ಬಹುದು ಎಂಬ ಅನುಮಾನ  ಹುಟ್ಟುಹಾಕಿದೆ.

ಪಿಎಂಒ ಮತ್ತು ಗುಜರಾತ್‌ ಸರ್ಕಾರದ ನಡುವೆ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿ ಫೆಬ್ರುವರಿ 27, 2002 ಮತ್ತು ಏಪ್ರಿಲ್‌ 30, 2002ರ ನಡುವೆ ನಡೆದಿರುವ ಎಲ್ಲ ಸಂವಹನದ ಪ್ರತಿ ಒದಗಿಸುವಂತೆ ಅರ್ಜಿ ಸಲ್ಲಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.