ADVERTISEMENT

ವಿಶ್ವ ಪರ್ಯಟನೆ ಮುಗಿಸಿದ ನೌಕಾದಳದ ಮಹಿಳಾ ಸಿಬ್ಬಂದಿ

ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಸ್ವಾಗತ

ಪಿಟಿಐ
Published 21 ಮೇ 2018, 19:22 IST
Last Updated 21 ಮೇ 2018, 19:22 IST
ನೌಕೆಯ ಮಹಿಳಾ ತಂಡವನ್ನು ಸ್ವಾಗತಿಸಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಪಿಟಿಐ ಚಿತ್ರ
ನೌಕೆಯ ಮಹಿಳಾ ತಂಡವನ್ನು ಸ್ವಾಗತಿಸಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಪಿಟಿಐ ಚಿತ್ರ   

ಪಣಜಿ: ವಿಶ್ವಪರ್ಯಟನೆ ಮುಗಿಸಿ ಎಂಟು ತಿಂಗಳ ಬಳಿಕ ಮರಳಿದ ಭಾರತೀಯ ನೌಕಾ ದಳದ ಮಹಿಳಾ ಸಿಬ್ಬಂದಿಯನ್ನು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌, ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಸುನಿಲ್ ಲಾಂಬಾ ಗೋವಾದಲ್ಲಿ ಸ್ವಾಗತಿಸಿದರು.

‘ನಾವಿಕ್‌ ಸಾಗರ್‌ ಪರಿಕ್ರಮ’ಕ್ಕೆ ಪಣಜಿ ಸಮೀಪದ ಐಎನ್‌ಎಸ್‌ ಮಾಂಡೊವಿ ಹಡಗು ಕಟ್ಟೆ ಸಮೀಪದಿಂದ 2017ರ ಸೆ.10ರಂದು ಚಾಲನೆ ನೀಡಲಾಗಿತ್ತು.

ಲೆಫ್ಟಿನೆಂಟ್‌ ಕಮಾಂಡರ್‌ಗಳಾದ ಪ್ರತಿಭಾ ಜಾಮ್ವಾಲ್ ಮತ್ತು ಸ್ವಾತಿ.ಪಿ ಮತ್ತು ಲೆಫ್ಟಿನೆಂಟ್ ಐಶ್ವರ್ಯಾ ಬೊಡ್ಡಪತಿ, ಎಸ್. ವಿಜಯಾ ದೇವಿ ಮತ್ತು ಪಾಯಲ್ ಗುಪ್ತಾ  ಅವರು ಲೆಫ್ಟಿನೆಂಟ್ ಕಮಾಂಡರ್ ವರ್ತಿಕಾ ಜೋಶಿ ಅವರ ನೇತೃತ್ವದಲ್ಲಿ ನೌಕೆಯಲ್ಲಿ ಪ್ರಯಾಣ ಬೆಳೆಸಿದ್ದರು.

ADVERTISEMENT

ಕಳೆದ ವರ್ಷದ ಫೆಬ್ರುವರಿ 18ರಂದು ಭಾರತೀಯ ನೌಕಾಪಡೆ ಸೇರಿದ ‘ಐಎನ್‌ಎಸ್‌ವಿ  ತಾರಿಣಿ’ ಎಂಬ 55 ಅಡಿ ಎತ್ತರದ ದೋಣಿಯಲ್ಲಿ ಈ ಪ್ರವಾಸ ಕೈಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.