ADVERTISEMENT

ವೇಗದ ರೈಲು ಯೋಜನೆ: ಜಪಾನ್ ಅಧಿಕಾರಿಗಳ ಜತೆ ಚರ್ಚೆ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2013, 11:11 IST
Last Updated 12 ಸೆಪ್ಟೆಂಬರ್ 2013, 11:11 IST
ವೇಗದ ರೈಲು ಯೋಜನೆ: ಜಪಾನ್ ಅಧಿಕಾರಿಗಳ ಜತೆ  ಚರ್ಚೆ
ವೇಗದ ರೈಲು ಯೋಜನೆ: ಜಪಾನ್ ಅಧಿಕಾರಿಗಳ ಜತೆ ಚರ್ಚೆ   

ಬೆಂಗಳೂರು(ಐಎಎನ್‌ಎಸ್): ಚೀನಾದಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಮಾವೇಶದಲ್ಲಿ ಭಾಗವಹಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಜಪಾನ್‌ನ ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಹಕುಬಾನ ಸಿಮೊಮುರ ಅವರನ್ನು ಸಮಾವೇಶ ಸ್ಥಳದಲ್ಲಿ ಭೇಟಿ ಮಾಡಿ, ಬಾಹ್ಯಾಕಾಶ ತಂತ್ರಜ್ಞಾನ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸಹಭಾಗಿತ್ವ ಕುರಿತು ಚರ್ಚೆ ನಡೆಸಿದರು.

ಹಾರ್ಡ್‌ವೇರ್ ಹಾಗೂ ಸಾಫ್ಟ್‌ವೇರ್ ಕೇತ್ರದಲ್ಲಿ ಮುಂಚೂಣಿಯಲ್ಲಿರುವ ಜಪಾನ್ ಮತ್ತು ಕರ್ನಾಟಕ ಜಂಟಿಯಾಗಿ ಮಾಹಿತಿ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ ಕ್ಷೇತ್ರಕ್ಕೆ ಉತ್ಯೇಜನ ನೀಡುವ ನಿಟ್ಟಿನಲ್ಲಿ ಅಧಿಕಾರಿಗಳು ಚರ್ಚೆ ನಡೆಸಿದ್ದು, ಅತಿ ವೇಗದ ರೈಲು ಯೋಜನೆ ಹಾಗೂ ಮೂಲಸೌಲಭ್ಯ ಯೋಜನೆಗಳಿಗೆ ಹೆಚ್ಚಿನ ನಿಧಿ ತೊಡಗಿಸುವ ಕುರಿತು ವಿಚಾರಣೆ ನಡೆಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರತದಲ್ಲೇ ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಮುಂಚೂಣಿಯ ಕೇಂದ್ರ ಎಂದು ಗುರುತಿಸಿಕೊಂಡಿರುವ ಬೆಂಗಳೂರಿಗೆ ಭೇಟಿ ನೀಡಿ ಎಂದು ಸಚಿವ ಹಕುಬಾನ ಸಿಮೊಮುರ ಅವನ್ನು ಸಿದ್ದರಾಮಯ್ಯ ಆಹ್ವಾನಿಸಿದರು.

ಇದೇ ವೇಳೆ ಸಿದ್ದರಾಮಯ್ಯ ಅವರು ದಲಿಯಾನ್ ಬಂದರಿನ 1.7 ಶತಕೋಟಿ ಟನ್ ಸಾಮರ್ಥ್ಯದ ಹೈಟೆಕ್ ಆಹಾರ ಧಾನ್ಯ ಸಂಗ್ರಹಾಗಾರ ಹಾಗೂ ರೈಲ್ವೆ ಸಂಪರ್ಕ ವ್ಯವಸ್ಥೆಯನ್ನು ವೀಕ್ಷಿಸಿದರು.

ಸಮಾವೇಶಲ್ಲಿ 90 ದೇಶಗಳಿಂದ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಪ್ರಮುಖರನ್ನು ಒಳಗೊಂಡಂತೆ ಎರಡು ಸಾವಿರಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.