ADVERTISEMENT

ಶೀಘ್ರ ರಾಷ್ಟ್ರಪತಿ ಆಸ್ತಿ ಬಹಿರಂಗ

​ಪ್ರಜಾವಾಣಿ ವಾರ್ತೆ
Published 18 ಜೂನ್ 2011, 19:30 IST
Last Updated 18 ಜೂನ್ 2011, 19:30 IST

ನವದೆಹಲಿ (ಪಿಟಿಐ): ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಶೀಘ್ರವೇ ತಮ್ಮ ಆಸ್ತಿಮೌಲ್ಯ ಘೋಷಿಸಲಿದ್ದು,  ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಲಿದ್ದಾರೆ. ರಾಷ್ಟ್ರಪತಿಯಾದವರು ಆಸ್ತಿ ಬಹಿರಂಗಪಡಿಸುತ್ತಿರುವುದು ರಾಷ್ಟ್ರದಲ್ಲಿ ಇದೇ ಮೊದಲು.

ಪ್ರಸ್ತುತ ರಾಷ್ಟ್ರಪತಿಯವರ ಆಸ್ತಿ ಘೋಷಣೆ ಕಡ್ಡಾಯಗೊಳಿಸುವ ಕಾನೂನು ನಮ್ಮಲ್ಲಿ ಇಲ್ಲ. ಕೇಂದ್ರ ಮಾಹಿತಿ ಆಯುಕ್ತರು ಕೂಡ, ರಾಷ್ಟ್ರಪತಿಯವರಿಗೆ ಆಸ್ತಿ ಘೋಷಿಸಲು ನಿರ್ದೇಶಿಸುವ ಅಧಿಕಾರ ತಮಗಿಲ್ಲ ಎಂದು ಶುಕ್ರವಾರವಷ್ಟೇ ಹೇಳಿದ್ದರು.

ರಾಷ್ಟ್ರಪತಿಯಾದವರು ತಮ್ಮ ಆಸ್ತಿಪಾಸ್ತಿ ಘೋಷಿಸಬೇಕೋ, ಬೇಡವೋ ಎಂಬುದು ಸ್ವತಃ ಅವರ ವಿವೇಚನೆಗೇ ಬಿಟ್ಟದ್ದು ಎಂದು ಆಯುಕ್ತ ಶೈಲೇಶ್ ಗಾಂಧಿ ಸ್ಪಷ್ಟಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.