ADVERTISEMENT

ಶೀಲಾ ದೀಕ್ಷಿತ್‌ ಪ್ರಮಾಣ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2014, 19:30 IST
Last Updated 9 ಮಾರ್ಚ್ 2014, 19:30 IST

ನವದೆಹಲಿ(ಐಎಎನ್‌ಎಸ್): ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್‌, ಕೇರಳದ ನೂತನ ರಾಜ್ಯ­ಪಾಲ­ರಾಗಿ ಮಂಗಳವಾರ ಪ್ರಮಾಣ­ವಚನ ಸ್ವೀಕರಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಕೇರಳ ರಾಜಧಾನಿ ತಿರುವನಂತ­ಪುರಕ್ಕೆ  ಕುಟುಂಬ ಸದಸ್ಯರು ಹಾಗೂ ತಮ್ಮ ಸಂಪುಟದಲ್ಲಿದ್ದ ಆಪ್ತರ ಜತೆ ಸೋಮವಾರ  ಶೀಲಾ ತೆರಳಲಿದ್ದಾರೆ.

2013 ರ ಮಾರ್ಚ್‌ನಿಂದ ಕೇರಳ ರಾಜ್ಯಪಾಲರಾಗಿ ದೆಹಲಿ ಮಾಜಿ ಪೊಲೀಸ್‌ ಅಧಿಕಾರಿ ನಿಖಿಲ್‌ ಕುಮಾರ್‌್ ಕಾರ್ಯನಿರ್ವಹಿಸು­ತ್ತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.