ADVERTISEMENT

ಸಿಂಗಪುರಕ್ಕೆ ನಟ ರಾಘವೇಂದ್ರ ರಾಜ್‌ಕುಮಾರ್‌

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2013, 19:30 IST
Last Updated 12 ಡಿಸೆಂಬರ್ 2013, 19:30 IST

ಬೆಂಗಳೂರು: ನಟ, ನಿರ್ಮಾ­ಪಕ  ರಾಘವೇಂದ್ರ ರಾಜ್‌ಕುಮಾರ್  ಅವರು ಫಿಸಿ­ಯೋ­­ಥೆರಪಿ ಚಿಕಿತ್ಸೆ­ಗಾಗಿ  ಶುಕ್ರವಾರ (ಡಿ. 13) ಸಿಂಗಪುರಕ್ಕೆ ತೆರಳಲಿ­ದ್ದಾರೆ. ಸಿಂಗ­ಪುರದ ಮೌಂಟ್‌ ಎಲಿಜಬೆತ್‌ ಆಸ್ಪತ್ರೆ­ಯಲ್ಲಿ ಅವರು ಚಿಕಿತ್ಸೆ ಪಡೆಯ­ಲಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಎರಡು ತಿಂಗಳ ಹಿಂದೆ ಸದಾಶಿವ­ನಗರದ ಮನೆ ಹತ್ತಿರದ ಅಫಿನಿಟಿ ಫಿಟ್‌ನೆಸ್‌ ಸೆಂಟರ್‌ನಲ್ಲಿ ಟ್ರೆಡ್‌ಮಿಲ್‌ ಮೇಲೆ ಓಡುತ್ತಿದ್ದಾಗ ರಾಘವೇಂದ್ರ ಅವರು ಕುಸಿದು ಬಿದ್ದಿದ್ದರು. ಬಳಿಕ ಯಶ­ವಂತಪುರದ ಕೊಲಂಬಿಯಾ ಏಷ್ಯಾ ಆಸ್ಪತ್ರೆ­ಯಲ್ಲಿ ಅವರು ಚಿಕಿತ್ಸೆ ಪಡೆದಿದ್ದರು.

‘ಸದ್ಯ ಅವರು ಆರೋಗ್ಯವಾಗಿದ್ದಾರೆ. ಸಿಂಗಪುರ­ದಲ್ಲಿ ಉತ್ತಮ ಫಿಸಿಯೋಥೆರಪಿ ಚಿಕಿತ್ಸೆ ಸಿಗುತ್ತದೆಂಬ ಕಾರಣಕ್ಕೆ ಅವರು ಅಲ್ಲಿಗೆ ಹೋಗುತ್ತಿ­ದ್ದಾರೆಯೇ ಹೊರತು ಆತಂಕ ಪಡುವಂಥದ್ದು ಏನೂ ಆಗಿಲ್ಲ. ಅವರ ಜತೆಗೆ ಪತ್ನಿ ಮಂಗಳಾ ಮತ್ತು ಸೋದರ ಶಿವರಾಜ್‌ ಕುಮಾರ್‌ ಸಹ ತೆರಳ­ಲಿ­ದ್ದಾರೆ’ ಎಂದು ರಾಘವೇಂದ್ರ ರಾಜ್‌­ಕುಮಾರ್ ಅವರ ಸೋದರ­ಮಾವ ಚಿನ್ನೇಗೌಡ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.