ADVERTISEMENT

ಸಿಐಸಿ ಆಗಿ ಸುಷ್ಮಾ ಸಿಂಗ್ ಪ್ರಮಾಣ ಸ್ವೀಕಾರ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2013, 10:45 IST
Last Updated 19 ಡಿಸೆಂಬರ್ 2013, 10:45 IST

ನವದೆಹಲಿ (ಪಿಟಿಐ): ಮಾಹಿತಿ ಆಯೋಗದ ಮುಖ್ಯಸ್ಥರಾಗಿ ನೇಮಕಗೊಂಡಿದ್ದ ಸುಷ್ಮಾ ಸಿಂಗ್ ಅವರು ಗುರುವಾರ ಪ್ರಮಾಣ ವಚನ ಸ್ವೀಕರಿಸಿದರು.

ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಷ್ಮಾ ಅವರಿಗೆ ಪ್ರಣವ್ ಮುಖರ್ಜಿ ಅಧಿಕಾರ ಗೌಪ್ಯತೆ ಬೋಧಿಸಿದರು.

ಈ ವೇಳೆ ಪ್ರಧಾನಿ ಡಾ. ಮನಮೋಹನ್ ಸಿಂಗ್, ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ADVERTISEMENT

ಪ್ರಧಾನಿ ಸಿಂಗ್, ಲೋಕಸಭಾ ಪ್ರತಿಪಕ್ಷ ನಾಯಕಿ ಸುಷ್ಮಾ ಸ್ವರಾಜ್‌ ಹಾಗೂ ಕಾನೂನು ಸಚಿವ ಕಪಿಲ್ ಸಿಬಲ್ ಅವರನ್ನೊಳಗೊಂಡ ಸಮಿತಿ, ಸುಷ್ಮಾ ಸಿಂಗ್ ಅವರನ್ನು ಮಾಹಿತಿ ಆಯೋಗದ ನೂತನ ಮುಖ್ಯಸ್ಥೆಯನ್ನಾಗಿ (ಸಿಐಸಿ) ಸರ್ವಾನುಮತದಿಂದ ನೇಮಿಸಿತ್ತು.

64 ವರ್ಷದ ಮಾಜಿ ಐಎಎಸ್‌ ಅಧಿಕಾರಿಯಾಗಿರುವ ಸುಷ್ಮಾ ಸಿಂಗ್, ಸಿಐಸಿ  ಸ್ಥಾನ ಅಲಂಕರಿಸಿದ ಎರಡನೇ ಮಹಿಳೆ. ಇದೇ ತಿಂಗಳು ನಿವೃತ್ತರಾಗಲಿರುವ ದೀಪಕ್ ಸಂಧು ಅವರು ಸಿಐಸಿ ಸ್ಥಾನ ಅಲಂಕರಿಸಿದ ಮೊದಲ ಮಹಿಳೆ. ಸಂಧು ಅವರು 2013 ಸೆಪ್ಟಂಬರ್ 5 ರಂದು ಸಿಐಸಿಯಾಗಿ ಅಧಿಕಾರ ಸ್ವೀಕರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.