ADVERTISEMENT

ಸೇನೆ ಬಳಕೆ: ಹೂಡಾಗೆ ಚಿಂತೆ

​ಪ್ರಜಾವಾಣಿ ವಾರ್ತೆ
Published 16 ಮೇ 2019, 19:31 IST
Last Updated 16 ಮೇ 2019, 19:31 IST

ಚಂಡಿಗಡ: ರಾಜಕೀಯ ವಾಗ್ವಾದಕ್ಕೆ ಸೇನಾ ಕಾರ್ಯಾಚರಣೆಯನ್ನು ಬಳಸುವುದು ಚಿಂತೆಗೆ ಕಾರಣವಾಗುವ ವಿಚಾರ ಎಂದು ನಿವೃತ್ತ ಲೆ. ಜ. ಡಿ.ಎಸ್‌. ಹೂಡಾ ಹೇಳಿದ್ದಾರೆ. ಹೂಡಾ ಅವರು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮೇಲೆ2016ರಲ್ಲಿ ನಡೆದ ನಿರ್ದಿಷ್ಟ ದಾಳಿಯ ರೂವಾರಿ.

‘ಚುನಾವಣೆಯಲ್ಲಿ ಗೆಲುವು ಪಡೆಯುವುದಕ್ಕಾಗಿ ಸೇನೆಯ ಹೆಸರು ಬಳಸಿಕೊಳ್ಳಲಾಗುತ್ತಿದೆ, ಇದು ನಿಜಕ್ಕೂ ಆತಂಕಕಾರಿ.ಎಲ್ಲ ರಾಜಕೀಯ ಪಕ್ಷಗಳು ರಾಜಕೀಯ ವಾಗ್ವಾದದಿಂದ ಸೇನೆಯನ್ನು ಹೊರಗಿರಿಸುವುದು ಅತ್ಯುತ್ತಮ. ಅದು ಸಾಧ್ಯವಿಲ್ಲ. ಯಾಕೆಂದರೆ, ಸೇನೆಯ ಹೆಸರು ಬಳಸಿ ಚುನಾವಣಾ ಗೆಲುವಿನ ರುಚಿ ರಾಜಕೀಯ ಮುಖಂಡರಿಗೆ ಸಿಕ್ಕಿದೆ’ ಎಂದು ಅವರು ಹೇಳಿದ್ದಾರೆ.

‘ಸೇನೆ ರಾಜಕೀಯಗೊಳ್ಳುತ್ತಿದೆ ಎಂಬ ಚರ್ಚೆ ಇದೆ. ಅದರ ಅರ್ಥ ಏನು? ಸೇನೆಯಲ್ಲಿರುವವರು ರಾಜಕೀಯ
ವಾಗಿ ಪಕ್ಷಪಾತಿ ನಿಲುವು ಹೊಂದಿದ್ದಾರೆ ಎಂದೇ? ಚಿಂತೆ ಮಾಡುವ ಮಟ್ಟದಲ್ಲಿ ಇದು ಇಲ್ಲ’ ಎಂದು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.