
ಪ್ರಜಾವಾಣಿ ವಾರ್ತೆನವದೆಹಲಿ: ಸಿಬ್ಬಂದಿಯ ವೇತನ ಪಾವತಿಯನ್ನೂ ಮಾಡಲಾಗದೆ ಸಂಕಷ್ಟದಲ್ಲಿರುವ ಕಿಂಗ್‌ಪಿಷರ್ ವಿಮಾನಯಾನ ಕಂಪೆನಿಗೆ, 60 ಕೋಟಿ ರೂಪಾಯಿ ಬಾಕಿ ಸೇವಾ ತೆರಿಗೆಯನ್ನು ಶೀಘ್ರವೇ ಪಾವತಿಸಲು ತೆರಿಗೆ ಇಲಾಖೆ ಸೂಚಿಸಿದೆ.
ಕಳೆದ ತಿಂಗಳು ಕಂಪೆನಿ 20 ಕೋಟಿ ರೂಪಾಯಿ ಸೇವಾ ತೆರಿಗೆ ಪಾವತಿಸಿತ್ತು.
`ಕಂಪೆನಿ ಪ್ರಯಾಣಿಕರಿಂದ ಸಂಗ್ರಹಿಸಿರುವ ಸೇವಾ ತೆರಿಗೆ ಇಲಾಖೆಗೆ ಸೇರಲೇಬೇಕು~ ಎಂದು ಕೇಂದ್ರ ಅಬಕಾರಿ ಮತ್ತು ಸೀಮಾಶುಲ್ಕ ಮಂಡಲಿಯ ಅಧ್ಯಕ್ಷ ಎಸ್.ಕೆ.ಗೋಯಲ್ ಸ್ಪಷ್ಟಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.