ADVERTISEMENT

ಸೈಬರ್ ಯುಗದ 'ಸುಳ್ಳು ಸುದ್ದಿ' ಮತ್ತು ವಾಸ್ತವ ಸಂಗತಿ

​ಪ್ರಜಾವಾಣಿ ವಾರ್ತೆ
Published 17 ಜೂನ್ 2017, 14:32 IST
Last Updated 17 ಜೂನ್ 2017, 14:32 IST
ಸೈಬರ್ ಯುಗದ 'ಸುಳ್ಳು ಸುದ್ದಿ' ಮತ್ತು ವಾಸ್ತವ ಸಂಗತಿ
ಸೈಬರ್ ಯುಗದ 'ಸುಳ್ಳು ಸುದ್ದಿ' ಮತ್ತು ವಾಸ್ತವ ಸಂಗತಿ   

ಬೆಂಗಳೂರು: ಸಾಮಾಜಿಕ ತಾಣಗಳಲ್ಲಿ ಹರಿದಾಡುವ ಸುದ್ದಿಗಳೆಲ್ಲೂ ನಿಜವಾಗಿರುವುದಿಲ್ಲ. ಕೆಲವು ಸುದ್ದಿಗಳು ನಿಜವಾಗಿದ್ದರೆ ಇನ್ನು ಕೆಲವು ಸುಳ್ಳು ಸುದ್ದಿಗಳು, ಆದರೆ ಕೆಲವೊಂದು ಸುಳ್ಳು ಸುದ್ದಿಗಳು ಎಷ್ಟರ ಮಟ್ಟಿಗೆ ಪ್ರಚಾರ ಗಿಟ್ಟಿಸುತ್ತವೆ ಎಂದರೆ ಅವುಗಳಲ್ಲಿ ವಾಸ್ತವಾಂಶ ಎಷ್ಟಿದೆ ಎಂಬುದನ್ನು ಪತ್ತೆ ಹಚ್ಚುವ ಗೋಜಿಗೆ ಹೋಗದೆ ಯಾರೋ ಪ್ರಮುಖ ವ್ಯಕ್ತಿಗಳು ಶೇರ್ ಮಾಡಿದ್ದಾರೆ ಎಂಬ ಕಾರಣದಿಂದ ಅದು ನಿಜ ಸುದ್ದಿ ಎಂದೇ ನಂಬಿ ಬಿಡುವ ಜನರು ನಮ್ಮಲ್ಲಿದ್ದಾರೆ. ರಾಜಕೀಯ ಪಕ್ಷಗಳೋ ಅಥವಾ ಇನ್ಯಾವುದೋ ಮೂಲಗಳಿಂದ ಹರಿಯ ಬಿಟ್ಟ ವದಂತಿಯಿಂದ ಅನಾಹುತ ಸಂಭವಿಸಿರುವ ಘಟನೆಗಳೂ ಧಾರಾಳ ಇವೆ.

ಇತ್ತೀಚೆಗೆ ಸಾಮಾಜಿಕ ತಾಣಗಳಲ್ಲಿ ಹರಿದಾಡಿದ ಕೆಲವು ಸುಳ್ಳು ಸುದ್ದಿಗಳು ಹೀಗಿವೆ


ಕೆಲವು ದಿನಗಳ ಹಿಂದೆಯಷ್ಟೇ ಪಾಕಿಸ್ತಾನ ಮತ್ತು ಬಾಂಗ್ಲಾದೇಶಕ್ಕೆ ಹೊಂದಿಕೊಂಡಿರುವ ಗಡಿಯಲ್ಲಿ ಅಕ್ರಮ ಸಾಗಣೆ ಮತ್ತು ಭಯೋತ್ಪಾದಕರ ನುಸುಳುವಿಕೆ ಮೇಲೆ ನಿಗಾ ಇಡಲು 647 ಕಿ.ಮೀ. ಗಡಿಯುದ್ದಕ್ಕೂ ಫ್ಲಡ್‌ಲೈಟ್ ಅಳವಡಿಸಲಾಗಿದೆ ಎಂದು ಗೃಹ ಸಚಿವಾಲಯ 2016–17ರ ವಾರ್ಷಿಕ ವರದಿಯಲ್ಲಿ ಚಿತ್ರವೊಂದನ್ನು ಪ್ರಕಟಿಸಿತ್ತು. ಆದರೆ ವರದಿಯಲ್ಲಿ ಬಳಕೆಯಾದ ಚಿತ್ರ ಸ್ಪೇನ್‌–ಮೊರಕ್ಕೊ ಗಡಿಯ ಚಿತ್ರವಾಗಿತ್ತು!

ADVERTISEMENT

ಸ್ಪ್ಯಾನಿಷ್‌ ಛಾಯಾಗ್ರಾಹಕ ಜಾವೇರ್‌ ಮೊಯನೊ 2006ರಲ್ಲಿ ತೆಗೆದ ಸ್ಪೇನ್‌–ಮೊರಕ್ಕೊ ಗಡಿಯ ಚಿತ್ರವನ್ನು ಗೃಹ ಸಚಿವಾಲಯ ವಾರ್ಷಿಕ ವರದಿಯಲ್ಲಿ ಪ್ರಕಟಿಸಿದೆ ಎಂದು ಆಲ್ಟ್ ನ್ಯೂಸ್ ಸುದ್ದಿ ಮಾಡುವವರೆಗೆ ಎಲ್ಲರೂ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಗಡಿಯ ಫ್ಲಡ್‍ಲೈಟ್ ಚಿತ್ರ  ನಿಜ ಎಂದೇ ನಂಬಿದ್ದರು.
ಚಿತ್ರದ ಅಸಲಿತನ ಬಹಿರಂಗವಾಗುತ್ತಿದ್ದಂತೆ ತೀವ್ರ ಮುಜುಗರಕ್ಕೊಳಗಾಗಿರುವ ಗೃಹ ಸಚಿವಾಲಯ ಇದೀಗ  ಸಮಗ್ರ ತನಿಖೆಗೆ ಆದೇಶಿಸಿದೆ.

ಎನ್‍ಡಿಟಿವಿ ವಿರುದ್ಧ ಆಪಾದನೆ ಮಾಡಲು ಸಂಬಿತ್ ಪಾತ್ರಾ ನಕಲಿ ಟ್ವೀಟ್ ಶೇರ್ ಮಾಡಿದ್ದರು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.