ADVERTISEMENT

ಸ್ಥಿರಾಸ್ತಿ ಮಾಹಿತಿ: ಐಎಎಸ್ ಅಧಿಕಾರಿಗಳ ವಿರುದ್ಧ ಕ್ರಮ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2012, 19:30 IST
Last Updated 11 ಏಪ್ರಿಲ್ 2012, 19:30 IST

ನವದೆಹಲಿ (ಪಿಟಿಐ): ಈತನಕ ಸ್ಥಿರಾಸ್ತಿ ಮಾಹಿತಿ ಸಲ್ಲಿಸದ ಕೇಂದ್ರದ ವಿವಿಧ ಸಚಿವಾಲಯಗಳ ಒಟ್ಟು 167 ಐಎಎಸ್ ಅಧಿಕಾರಿಗಳ ವಿರುದ್ಧ ಆಡಳಿತಾತ್ಮಕ ಕ್ರಮ ಜರುಗಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

ಇಂತಹ ಅಧಿಕಾರಿಗಳಲ್ಲಿ ಗರಿಷ್ಠ 19 ಮಂದಿ ಗೃಹ ಸಚಿವಾಲಯಕ್ಕೆ ಸೇರಿದ್ದರೆ, 18 ಮಂದಿ ರಕ್ಷಣಾ ಸಚಿವಾಲಯ, 17 ಮಂದಿ ಆರೋಗ್ಯ ಸಚಿವಾಲಯದಲ್ಲಿದ್ದಾರೆ ಎಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆ ತಿಳಿಸಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.