ಅಹಮ್ಮದಾಬಾದ್ (ಪಿಟಿಐ): ‘ಹಾರುವ ರಾಣಿ’ ಎಂದೇ ಹೆಸರಾಗಿರುವ ಸೂರತ್-ಮುಂಬೈ ಎಕ್ಸ್‌ಪ್ರೆಸ್ ರೈಲಿನ ಮೂರು ಬೋಗಿಗಳು ಹಳಿತಪ್ಪಿರುವ ಘಟನೆ ಸೂರತ್ ಮತ್ತು ಉಧ್ನಾ ನಿಲ್ದಾಣಗಳ ಮಧ್ಯದ ಮುಂಬೈ ಗಡಿಯಲ್ಲಿ ಭಾನುವಾರ ಸಂಭವಿಸಿದೆ.
ಘಟನೆಯಿಂದ ಯಾವುದೇ ರೀತಿಯ ಹಾನಿಯಾಗಿಲ್ಲ. ಆದರೆ, ಮುಂಬೈ-ಅಹಮ್ಮದಾಬಾದ್ ರೈಲು ಮಾರ್ಗದಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಘಟನೆ ನಡೆದ ಬಳಿಕ ಈ ರೈಲು ಸೂರತ್ ನಿಲ್ದಾಣಕ್ಕೆ ಮರಳಿತು ಎಂದು ರೈಲ್ವೆ ಇಲಾಖೆಯ ಅಧಿಕಾರಿಗಳು ತಿಳಿಸಿದರು. ಹಳಿ ರಿಪೇರಿ ಕೆಲಸ ಕೈಗೆತ್ತಿಕೊಂಡಿರುವುದರಿಂದ ರೈಲು ಸಂಚಾರ ರದ್ದುಪಡಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.