ADVERTISEMENT

ಹಾರ್ದಿಕ್ ವಿರುದ್ಧ ಜಾಮೀನುರಹಿತ ವಾರಂಟ್

ಪಿಟಿಐ
Published 25 ಅಕ್ಟೋಬರ್ 2017, 19:30 IST
Last Updated 25 ಅಕ್ಟೋಬರ್ 2017, 19:30 IST
ಹಾರ್ದಿಕ್ ವಿರುದ್ಧ ಜಾಮೀನುರಹಿತ ವಾರಂಟ್
ಹಾರ್ದಿಕ್ ವಿರುದ್ಧ ಜಾಮೀನುರಹಿತ ವಾರಂಟ್   

ಅಹಮದಾಬಾದ್: ಪಟೇಲ್‌ ಮೀಸಲಾತಿ ಹೋರಾಟದ ನಾಯಕ ಹಾರ್ದಿಕ್ ಪಟೇಲ್ ಮತ್ತು ಇಬ್ಬರು ನಾಯಕರ ವಿರುದ್ಧ ಇಲ್ಲಿನ ವಿಸನಗರ ನ್ಯಾಯಾಲಯವು ಜಾಮೀನುರಹಿತ ಬಂಧನ ವಾರಂಟ್ ಹೊರಡಿಸಿದೆ.

ಪಟೇಲ್ ಸಮುದಾಯಕ್ಕೆ ಮೀಸಲಾತಿಗೆ ಆಗ್ರಹಿಸಿ 2015ರ ಜುಲೈನಲ್ಲಿ ಭಾರಿ ಪ್ರತಿಭಟನೆ ನಡೆದಿತ್ತು. ಆಗ ಬಿಜೆಪಿ ಶಾಸಕ ಋಶಿಕೇಶ್ ಪಟೇಲ್ ಅವರ ಕಚೇರಿ ಮೇಲೆ ಪ್ರತಿಭಟನಾಕಾರರು ದಾಳಿ ನಡೆಸಿ ಕಚೇರಿಯನ್ನು ಧ್ವಂಸ ಮಾಡಿದ್ದರು. ಈ ಸಂಬಂಧ ಹಾರ್ದಿಕ್ ಪಟೇಲ್, ಲಾಲ್‌ಜಿತ್ ಪಟೇಲ್ ಮತ್ತು ಅತುಲ್ ಪಟೇಲ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಪ್ರಕರಣದ ಕಳೆದ ಮೂರು ವಿಚಾರಣೆಗೆ ಹಾರ್ದಿಕ್ ಗೈರು ಹಾಜರಾಗಿದ್ದರು. ಜತೆಗೆ ಬುಧವಾರದ ವಿಚಾರಣೆಗೆ ಉಳಿದ ಇಬ್ಬರು ಮುಖಂಡರೂ ಗೈರು ಹಾಜರಾಗಿದ್ದರು. ಹೀಗಾಗಿ ನ್ಯಾಯಾಲಯ ಮೂವರ ವಿರುದ್ಧ ವಾರಂಟ್ ಹೊರಡಿಸಿದೆ.

‘ಕೇವಲ ಒಂದು ದಿನ ವಿಚಾರಣೆಗೆ ಗೈರು ಹಾಜರಾಗಿದ್ದಕ್ಕೆ ವಾರಂಟ್ ಹೊರಡಿಸಲಾಗಿದೆ. ಬಿಜೆಪಿ ವಿರುದ್ಧದ ನಮ್ಮ ಹೋರಾಟವನ್ನು ಮತ್ತಷ್ಟು ಹೆಚ್ಚಿಸುತ್ತೇವೆ’ ಎಂದು ಲಾಲ್‌ಜಿತ್ ಪಟೇಲ್ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.