
ಪ್ರಜಾವಾಣಿ ವಾರ್ತೆವಡೋದರ (ಪಿಟಿಐ): ಆಸ್ಟ್ರೇಲಿಯಾದಲ್ಲಿ ಸಹಪಾಠಿಯಿಂದಲೇ ಅತ್ಯಾಚಾರಕ್ಕೆ ಒಳಗಾಗಿ, ಕೊಲೆಗೀಡಾದ ಭಾರತೀಯ ಮೂಲದ ವಿದ್ಯಾರ್ಥಿನಿ ತೋಷಾ ಠಕ್ಕರ್ ಅವರ ಅಂತ್ಯಕ್ರಿಯೆ ಶನಿವಾರ ನಡೆಯಿತು. ಇದೇ 9ರಂದು ಈ ಕೃತ್ಯ ನಡೆದಿತ್ತು.
ಸಿಡ್ನಿಯಿಂದ ಇಲ್ಲಿನ ಸರ್ದಾರ್ ವಲ್ಲಭಬಾಯ್ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೆಳಿಗ್ಗೆ 3 ಗಂಟೆಗೆ ಶವ ತಲುಪಿತು. ಅಲ್ಲಿಂದ ಬಜ್ವಾಡ ಎಂಬಲ್ಲಿರುವ ತೋಷಾ ಅವರ ಮನೆಗೆ ಒಯ್ಯಲಾಯಿತು. ಬಿಜೆಪಿ ಸಂಸದ ಬಾಲಕೃಷ್ಣ ಶುಕ್ಲ, ಶಾಸಕ ಭೂಪೇಂದ್ರ ಲಾಕ್ವಾಲ ಮತ್ತಿತರರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಭಾರತದಲ್ಲಿ ವಿಚಾರಣೆ ಆಗಲಿ: ಆರೋಪಿ ಡೇನಿಯಲ್ ಸ್ಟ್ಯಾನಿ ರೆಜಿನಾಲ್ಡ್‌ನ (19) ವಿಚಾರಣೆಯನ್ನು ಭಾರತದಲ್ಲಿ ನಡೆಸಿ ಆತನಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ತೋಷಾ ಅವರ ತಂದೆ ಸುನಿಲ್ ಠಕ್ಕರ್ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.