ADVERTISEMENT

36 ವರ್ಷ ಜೈಲು ಶಿಕ್ಷೆ ಅನುಭವಿಸಿ ಹೊರಬಂದ 104 ವರ್ಷದ ರಸಿಕ!

ಪಿಟಿಐ
Published 4 ಡಿಸೆಂಬರ್ 2024, 10:05 IST
Last Updated 4 ಡಿಸೆಂಬರ್ 2024, 10:05 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಕೊಲ್ಕತ್ತ: ಬರೋಬ್ಬರಿ 36 ವರ್ಷಗಳ ಶಿಕ್ಷೆ ಅನುಭವಿಸಿ 104 ವರ್ಷದ ವ್ಯಕ್ತಿಯೊಬ್ಬರು ಜೈಲಿನಿಂದ ಬಿಡುಗಡೆಯಾದ ಘಟನೆ ಪಶ್ಚಿಮ ಬಂಗಾಳದ ಮಾಲ್ದಾ ಜಿಲ್ಲೆಯಲ್ಲಿ ನಡೆದಿದೆ.

ರಸಿಕ ಮಂಡಲ್‌ ಎನ್ನುವವರು ಸಹೋದರನನ್ನು ಹತ್ಯೆ ಮಾಡಿದ ಆರೋಪದಲ್ಲಿ 1988ರಲ್ಲಿ ಜೈಲು ಸೇರಿದ್ದರು. ಬಳಿಕ 1992ರಲ್ಲಿ ಮಾಲ್ದಾ ಜಿಲ್ಲಾ ನ್ಯಾಯಾಲಯ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಆಗ ಅವರಿಗೆ 72 ವರ್ಷ ವಯಸ್ಸಾಗಿತ್ತು.

ADVERTISEMENT

2020ರಲ್ಲಿ ಅವರು ಪರೋಲ್‌ ಮೇಲೆ ಹೊರಗೆ ಬಂದಿದ್ದರೂ, ಅವಧಿ ಮುಗಿಯುತ್ತಿದ್ದಂತೆ ಮತ್ತೆ ಜೈಲಿಗೆ ಶರಣಾಗಿದ್ದರು.

‘ನಾನು ಎಷ್ಟು ವರ್ಷ ಜೈಲಿನಲ್ಲಿ ಕಳೆದಿದ್ದೇನೆ ಎನ್ನುವುದು ನೆನಪಿನಲ್ಲಿ ಇಲ್ಲ. ಜೈಲುವಾಸ ಮುಗಿಯುವುದೇ ಇಲ್ಲ ಎಂದುಕೊಂಡಿದ್ದೆ. ಇಲ್ಲಿಗೆ (ಜೈಲಿಗೆ) ಯಾಕೆ ಬಂದೆ ಎನ್ನುವುದನ್ನು ಮತ್ತೆ ನೆನಪಿಸಿಕೊಳ್ಳಲು ಇಷ್ಟಪಡುವುದಿಲ್ಲ. ಜೈಲಿನಿಂದ ಹೊರಬಂದಿರುವುದು ಬಹಳ ಖುಷಿಯಾಗಿದೆ. ನನ್ನ ಮುಂದಿನ ದಿನಗಳನ್ನು ಹಸಿರು ಗಿಡಗಳೊಂದಿಗೆ ಕಳೆಯಲು ಬಯಸುತ್ತೇನೆ. ಕುಟುಂಬ, ಮೊಮ್ಮಕ್ಕಳೊಂದಿಗೆ ಇಷ್ಟು ದಿನ ಕಳೆದುಕೊಂಡ ದಿನಗಳನ್ನು ಜೀವಿಸಲು ಬಯಸುತ್ತೇನೆ’ ಎಂದು ರಸಿಕ ಅವರು ಸುದ್ದಿಗಾರರೊಂದಿಗೆ ಮಾತನಾಡುವಾಗ ಹೇಳಿದ್ದಾರೆ.

‘ಸುಪ್ರೀಂ ಕೋರ್ಟ್‌ನ ಆದೇಶದಡಿ ನಮ್ಮ ತಂದೆ ಬಿಡುಗಡೆಯಾಗಿದ್ದಾರೆ’ ಎಂದು ರಸಿಕ ಅವರ ಪುತ್ರ ಪ್ರಕಾಶ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.