ADVERTISEMENT

ಮ್ಯಾನ್ಮಾರ್‌ಗೆ ಕಳ್ಳಸಾಗಣೆ ಆಗುತ್ತಿದ್ದ 140 ವನ್ಯಜೀವಿಗಳ ರಕ್ಷಣೆ– ಮೂವರ ಬಂಧನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಅಕ್ಟೋಬರ್ 2022, 13:58 IST
Last Updated 15 ಅಕ್ಟೋಬರ್ 2022, 13:58 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಗುವಾಹಟಿ: ಅಪರೂಪದ ವನ್ಯಜೀವಿಗಳನ್ನು ನೆರೆಯ ಮ್ಯಾನ್ಮಾರ್ ದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ ತಂಡವನ್ನುಮಿಜೊರಾಂ ಪೊಲೀಸರುಚಂಪೈ ಜಿಲ್ಲೆಯಲ್ಲಿ ಶನಿವಾರ ಬಂಧಿಸಿದ್ದಾರೆ.

ಸ್ಥಳೀಯ ಪೊಲೀಸರು ಅಬಕಾರಿ ಪೊಲೀಸರ ಹಾಗೂ ಮಾದಕ ದ್ರವ್ಯ ನಿಯಂತ್ರಣಾ ಪಡೆಯಸಹಕಾರದೊಂದಿಗೆ ಕಾರ್ಯಾಚರಣೆ ಮಾಡಿಬಂಧಿತರಿಂದ 140 ಅಪರೂಪದ ವನ್ಯಜೀವಿಗಳನ್ನು ವಶಪಡಿಸಿಕೊಂಡಿದ್ದಾರೆ.

ಇದರಲ್ಲಿ30 ಆಮೆಗಳು, ಎರಡು ಕೋತಿಗಳು, ಎರಡು ಚಿಕ್ಕಮೂತಿಯಮಂಗಗಳು, 22 ಹೆಬ್ಬಾವುಗಳು, 18 ಸುಮಾತ್ರಾನ್ ವಾಟರ್ ಮಾನಿಟರ್‌ಗಳು (ನೀರಿನಲ್ಲಿರುವ ಉಡದ ರೀತಿ ಪ್ರಾಣಿ), 55 ಮೊಸಳೆಗಳು, ನಾಲ್ಕು ಬೋವರ್‌ ಹಕ್ಕಿಗಳು, ನಾಲ್ಕು ಅಪರೂಪದ ಕಾಡು ಬೆಕ್ಕುಗಳು ಮತ್ತು ಒಂದು ಅಲ್ಬಿನೋ ವಾಲಾಬಿ (ಕಾಂಗರೂ ತರದ ಪ್ರಾಣಿ)ಸೇರಿದೆ.

ADVERTISEMENT

ಪ್ರಕರಣಕ್ಕೆ ಸಂಬಂಧಿಸಿದಂತೆಲಾಲೆಮ್ರುವಾಟಾ (38), ಟಿಂಖುಮಾ (38) ಮತ್ತು ಇ ಲಾಲ್ಮುವಾನ್ಪುಯಾ ಎಂಬಮೂವರನ್ನು ಪೊಲೀಸರು ಬಂಧಿಸಿದ್ದು, ಅವರಿಂದ 1 ಸ್ಕಾರ್ಪಿಯೋ ಹಾಗೂ 2 ಬೊಲೆರೊ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ವಶಪಡಿಸಿಕೊಂಡ ಪ್ರಾಣಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದ್ದು, ಅವುಗಳ ಸುರಕ್ಷತೆ ವಹಿಸಲಾಗಿದೆ ಎಂದು ಪೊಲೀಸರು ತಿಳಿಸಿರುವುದಾಗಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವೆಬ್‌ತಾಣ ವರದಿ ಮಾಡಿದೆ.

ಈಶಾನ್ಯ ರಾಜ್ಯಗಳಲ್ಲಿ ಪೊಲೀಸರು ಪತ್ತೆ ಹಚ್ಚಿರುವ ಅತಿದೊಡ್ಡ ವನ್ಯಜೀವಿ ಕಳ್ಳಸಾಗಣೆ ಪ್ರಕರಣ ಇದಾಗಿದೆ. ಕಳೆದ ಸೆಪ್ಟೆಂಬರ್‌ನಲ್ಲಿ ಅಸ್ಸಾಂನ ಕಾಮರೂಪ್ ಜಿಲ್ಲೆಯಲ್ಲಿಇದೇ ರೀತಿ ಕಳ್ಳಸಾಗಣೆದಾರರಿಂದ 41 ವನ್ಯಜೀವಿಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ಮಿಜೊರಾಂ ಮ್ಯಾನ್ಮಾರ್ ಜೊತೆ ಗಡಿ ಹಂಚಿಕೊಂಡಿರುವುದರಿಂದ ವನ್ಯಜೀವಿ ಕಳ್ಳಸಾಗಣೆದಾರರಿಗೆಕಳ್ಳಸಾಗಣೆ ಮಾಡಲು ಪ್ರಮುಖ ಮಾರ್ಗವಾಗಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.