ನವದೆಹಲಿ: ಕೋವಿಡ್ 19 ಸೋಂಕು ಪತ್ತೆ ಹಚ್ಚುವ ಮೊದಲ ಮತ್ತು ಎರಡನೇ ಹಂತದ ಪರೀಕ್ಷೆ ದೇಶಾದ್ಯಂತ ಎಲ್ಲ ನಾಗರಿಕರಿಗೆ ಉಚಿತ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ವಿಶೇಷ ಕಾರ್ಯದರ್ಶಿ ಸಂಜೀವ್ ಕುಮಾರ್ ಹೇಳಿದ್ದಾರೆ.
ಸುದ್ದಿ ಸಂಸ್ಥೆ ಎಎನ್‌ಐ ಜೊತೆ ಮಾತನಾಡಿರುವ ಅವರು, ಕೋವಿಡ್ ವಿರುದ್ಧ ಹೋರಾಡಲು ಸರ್ಕಾರ ವೈದ್ಯಕೀಯವಾಗಿ ಶಕ್ತವಾಗಿದೆ.ಆದರೆ, ದೇಶದ ವೈದ್ಯಕೀಯ ಶಕ್ತಿಯಲ್ಲಿ ಈವರೆಗೆ ಶೇ. 10ರಷ್ಟು ಮಾತ್ರ ಉಪಯೋಗವಾಗಿದೆ ಎಂದು ಸಂಜೀವ್ ಕುಮಾರ್ ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.