ADVERTISEMENT

2ಜಿ ತರಂಗಾಂತರ: ನಿರ್ಧಾರ ಮುಂದಕ್ಕೆ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2012, 19:30 IST
Last Updated 10 ಮಾರ್ಚ್ 2012, 19:30 IST

ನವದೆಹಲಿ (ಪಿಟಿಐ): 2ಜಿ ತರಂಗಾಂತರ ಹಂಚಿಕೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ಆದೇಶವನ್ನು ರಾಷ್ಟ್ರಪತಿ ಅವರ ಪರಾಮರ್ಶೆಗೆ ಬಿಡುವ ನಿರ್ಧಾರವನ್ನು ಶನಿವಾರ ಕೇಂದ್ರ ಸಂಪುಟವು ಮುಂದಕ್ಕೆ ಹಾಕಿದೆ.

ನಿರ್ಧಾರಕ್ಕೆ ಮುನ್ನ ಸಾಲಿಸಿಟರ್ ಜನರಲ್ ಅವರ ಅನಿಸಿಕೆ ಕೇಳಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.ಈ ಸಂಬಂಧ ಮತ್ತೊಂದು ಸಭೆ ಮುಂದಿನ ವಾರ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.