ADVERTISEMENT

2ಜಿ: ನನ್ನ ವಿರುದ್ಧ ಪುರಾವೆಗಳಿಲ್ಲ–ರಾಜಾ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2014, 19:30 IST
Last Updated 14 ಮಾರ್ಚ್ 2014, 19:30 IST

ನವದೆಹಲಿ(ಐಎಎನ್‌ಎಸ್‌): ‘2ಜಿ ತರಂಗಾಂ­ತರ ಹಂಚಿಕೆ ಹಗರಣದಲ್ಲಿ ನನ್ನ ವಿರುದ್ಧ ಸಾಕ್ಷ್ಯಾಧಾರಗಳಿಲ್ಲ. ನಾನು ಮುಗ್ಧ’ ಎಂದು  ದೂರಸಂಪರ್ಕ ಖಾತೆ  ಮಾಜಿ ಸಚಿವ ಎ.ರಾಜಾ ಶುಕ್ರವಾರ ಹೇಳಿದ್ದಾರೆ.

‘ಎರಡು ವಿಷಯಗಳು ಸ್ಪಷ್ಟ. ಮೊದಲನೆ ಯದು ಹಗರಣದಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗಿಲ್ಲ. ಎರಡನೆಯದಾಗಿ ನನ್ನ ಬಳಿ ಅಕ್ರಮ ಸಂಪತ್ತು ಇಲ್ಲ’ ಎಂದು ಖಾಸಗಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅವರು ಸ್ಪಷ್ಟ ಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.