ಲಖನೌ: ಕೊರೊನಾ ವೈರಸ್ ವಿರುದ್ಧ ಇಡೀ ರಾಷ್ಟ್ರವೇ ಎಚ್ಚರಿಕೆಯಿಂದ ಹೋರಾಡುತ್ತಿರುವ ನಡುವೆಯೇ ಉತ್ತರ ಪ್ರದೇಶದಲ್ಲಿ ಅಜಾಗರೂಕ ಘಟನೆಯೊಂದು ನಡೆದಿದೆ.
ಮೊರಾಬಾದ್‌ನ ಕ್ವಾರಂಟೈನ್‌ನಲ್ಲಿದ್ದ ಇಬ್ಬರು ಸೋಂಕಿತರನ್ನು ಹೆಸರಿನ ಗೊಂದಲದಿಂದಾಗಿ ಬಿಟ್ಟು ಕಳುಹಿಸಿರುವ ಘಟನೆ ಗುರುವಾರ ನಡೆದಿದ್ದು, ಒಂದು ದಿನ ತಡವಾಗಿ ಬಯಲಾಗಿದೆ.
‘ಹೆಸರು ಒಂದೇ ಇದ್ದ ಕಾರಣದಿಂದಾಗಿ ಇಬ್ಬರು ಸೋಂಕಿತರನ್ನು ಕ್ವಾರಂಟೈನ್ ಕೇಂದ್ರದಿಂದ ಬಿಡುಗಡೆ ಮಾಡಲಾಗಿತ್ತು. ಆದರೆ, ಅವರನ್ನು ಮತ್ತೆ ಕ್ವಾರಂಟೈನ್ ಕೇಂದ್ರಕ್ಕೆ ಕರೆ ತರಲಾಗಿದೆ. ಘಟನೆ ಸಂಬಂಧ ತನಿಖೆಗೆ ಆದೇಶಿಸಲಾಗಿದೆ,’ ಎಂದು ಮೊರಾಬಾದ್‌ನ ಮುಖ್ಯ ವೈದ್ಯಾಧಿಕಾರಿ ಎಂ.ಸಿ ಗರಗ್ ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ಒಟ್ಟು 1604 ಸೋಂಕು ಪ್ರಕರಣಗಳಿದ್ದು, ಅಲ್ಲಿ ಈ ವರೆಗೆ 24 ಮಂದಿ ಮೃತಪಟ್ಟಿದ್ದಾರೆ. 204 ಮಂದಿ ಮೃತಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.