ADVERTISEMENT

ದಾಬೋಲ್ಕರ್‌ ಹತ್ಯೆ ಆರೋಪಿಗಳು ಸಿಬಿಐ ವಶಕ್ಕೆ

ಪಿಟಿಐ
Published 26 ಮೇ 2019, 11:59 IST
Last Updated 26 ಮೇ 2019, 11:59 IST
ನರೇಂದ್ರ ದಾಬೋಲ್ಕರ್‌ 
ನರೇಂದ್ರ ದಾಬೋಲ್ಕರ್‌    

ಪುಣೆ: ನರೇಂದ್ರ ದಾಬೋಲ್ಕರ್‌ ಹತ್ಯೆ ಪ್ರಕರಣದ ಸಾಕ್ಷ್ಯಗಳನ್ನು ನಾಶಪಡಿಸಲು ಸಹಾಯ ಮಾಡಿದ ಆರೋಪದ ಮೇಲೆ ಬಂಧಿಸಲಾಗಿರುವವಕೀಲ ಮತ್ತು ಸನಾತನ ಸಂಸ್ಥೆಯ ಸದಸ್ಯನನ್ನು ಪುಣೆ ನ್ಯಾಯಾಲಯ ಸಿಬಿಐ ವಶಕ್ಕೆ ಒಪ್ಪಿಸಿದೆ.

ಭಾನುವಾರ ನಡೆದ ವಿಚಾರಣೆಯಲ್ಲಿಆರೋಪಿಗಳಾದ ವಕೀಲ ಸಂಜೀವ್‌ ಪುನಲೇಕರ್ ಮತ್ತು ಸನಾತನ ಸಂಸ್ಥೆಯ ಸದಸ್ಯವಿಕ್ರಂ ಬಾವೆ ಅವರನ್ನು ತನಿಖೆಗೆ ಒಳಪಡಿಸಲುಜೂನ್‌ 1ರವರೆಗೆ ವಶಕ್ಕೆ ಪಡೆಯುವಂತೆಸಿಬಿಐಗೆ ನ್ಯಾಯಾಧೀಶ ಎಸ್‌.ಎನ್‌.ಸೋನವಾನೆ ಸೂಚಿಸಿದ್ದಾರೆ.

ನರೇಂದ್ರ ದಾಬೋಲ್ಕರ್‌ ಮತ್ತು ಗೌರಿ ಲಂಕೇಶ್‌ ಹತ್ಯೆ ಆರೋಪಿ ಶರದ್‌ ಕಲಸ್ಕರ್‌ ಜೊತೆಗೆ ವಕೀಲ ಪುನಲೇಕರ್ ಕೈ ಜೋಡಿಸಿರುವ ಕುರಿತು ಬಲವಾದ ಸಾಕ್ಷಾಧಾರಗಳಿವೆ. ಅಲ್ಲದೆ,ಇನ್ನೊಬ್ಬ ಆರೋಪಿ ವಿಕ್ರಂ ಬಾವೆ 2008ರಲ್ಲಿ ನಡೆದ ಗಡ್ಕರಿ ರಂಗಯಾತನ್ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದ್ದು, ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ ಮತ್ತು ಮಾಲೆಗಾಂವ್ ಸ್ಫೋಟದ ಕುರಿತು ಪುಸ್ತಕ ಬರೆದಿದ್ದಾನೆ ಎಂದುಸಿಬಿಐ ಕೋರ್ಟ್‌ಗೆ ಮಾಹಿತಿ ನೀಡಿದೆ. ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸುವಂತೆ ನ್ಯಾಯಾಲಯ ಸೂಚಿಸಿದೆ.

ADVERTISEMENT

ಇದುವರೆಗೂ ಸಿಬಿಐ ದಾಬೋಲ್ಕರ್‌, ಪನ್ಸಾರೆ ಹತ್ಯೆ ಪ್ರಕರಣದಲ್ಲಿ ಸನಾತನ ಸಂಸ್ಥೆಯ ವೀರೇಂದ್ರ ಸಿನ್ಹ ತಾವ್ಡೆ, ಸಚಿನ್‌ ಅದುರೆ ಮತ್ತು ಕಲಾಸ್ಕರ್‌ ಸೇರಿದಂತೆ ಆರು ಆರೋಪಿಗಳನ್ನು ಬಂಧಿಸಿದೆ. ಗೌರಿ ಹತ್ಯೆಗೆ ಸಂಬಂಧಿಸಿದಂತೆ ಬಂಗೇರ ಮತ್ತು ಕಾಳೆ ಎಂಬುವರನ್ನು ಬಂಧಿಸಿದೆ.ನರೇಂದ್ರ ದಾಬೋಲ್ಕರ್ ಅವರು ದುಷ್ಕರ್ಮಿಗಳ ಗುಂಡಿಗೆ ಆಗಸ್ಟ್ 20, 2013ರಂದು ಬಲಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.