ADVERTISEMENT

ಪಂಜಾಬ್‌ ರೈಲು ಅಪಘಾತ– ಲೋಕೊ ಪೈಲಟ್‌ಗಳಿಗೆ ಗಾಯ

ಪಿಟಿಐ
Published 2 ಜೂನ್ 2024, 13:15 IST
Last Updated 2 ಜೂನ್ 2024, 13:15 IST
ಪಂಜಾಬ್‌ನ ಸರ್‌ಹಿಂದ್‌ ರೈಲು ನಿಲ್ದಾಣದ ಬಳಿ ಭಾನುವಾರ ಸಂಭವಿಸಿರುವ ರೈಲು ಅಪಘಾತದ ದೃಶ್ಯ –ಪಿಟಿಐ ಚಿತ್ರ
ಪಂಜಾಬ್‌ನ ಸರ್‌ಹಿಂದ್‌ ರೈಲು ನಿಲ್ದಾಣದ ಬಳಿ ಭಾನುವಾರ ಸಂಭವಿಸಿರುವ ರೈಲು ಅಪಘಾತದ ದೃಶ್ಯ –ಪಿಟಿಐ ಚಿತ್ರ   

ಫತೇಘರ್‌ ಸಾಹಿಬ್‌ (ಪಂಜಾಬ್‌): ಸರ್‌ಹಿಂದ್‌ ರೈಲು ನಿಲ್ದಾಣದಲ್ಲಿ ಭಾನುವಾರ ಬೆಳಿಗ್ಗೆ ನಿಂತಿದ್ದ ಸರಕು ಸಾಗಣೆ ರೈಲಿಗೆ ಹಿಂದಿನಿಂದ ಮತ್ತೊಂದು ರೈಲು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಲೋಕೊ ಪೈಲಟ್‌ಗಳು ಗಾಯಗೊಂಡಿದ್ದಾರೆ.

ಡಿಕ್ಕಿಯ ರಭಸಕ್ಕೆ ಒಂದು ರೈಲಿನ ಎಂಜಿನ್‌ ಪಕ್ಕದ ಹಳಿ ಬಳಿ ಮುಗುಚಿ, ಅಲ್ಲಿದ್ದ ಪ್ಯಾಸೆಂಜರ್ ರೈಲಿಗೂ ಡಿಕ್ಕಿ ಹೊಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ. ಗಾಯಗೊಂಡಿರುವ ಲೋಕೊ ಪೈಲಟ್‌ಗಳಾದ ವಿಕಾಸ್‌ ಕುಮಾರ್‌ ಮತ್ತು ಹಿಮಾಂಶು ಕುಮಾರ್‌ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.