ADVERTISEMENT

ಇಂಡೊ–ನೇಪಾಳ ಗಡಿ: ಪಾಕ್‌ನ ಇಬ್ಬರು ಸೇರಿ ಮೂವರ ಬಂಧನ

ಭಯೋತ್ಪಾದನಾ ಚಟುವಟಿಕೆ ನಡೆಸಲು ಯೋಜಿಸುತ್ತಿದ್ದ ಆರೋಪಿಗಳು

ಪಿಟಿಐ
Published 4 ಏಪ್ರಿಲ್ 2024, 15:59 IST
Last Updated 4 ಏಪ್ರಿಲ್ 2024, 15:59 IST
.
.    

ಲಖನೌ: ಭಾರತದಲ್ಲಿ ಭಯೋತ್ಪಾದನಾ ಚಟುವಟಿಕೆಗಳನ್ನು ನಡೆಸಲು ಯೋಜಿಸುತ್ತಿದ್ದ ಆರೋಪದ ಮೇರೆಗೆ ಇಬ್ಬರು ಪಾಕಿಸ್ತಾನದ ಪ್ರಜೆಗಳು ಸೇರಿ ಮೂವರನ್ನು ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್‌) ಗುರುವಾರ ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಗಳನ್ನು ಪಾಕಿಸ್ತಾನದ ರಾವಲ್ಪಿಂಡಿ ನಿವಾಸಿ ಮೊಹಮ್ಮದ್‌ ಅಲ್ತಾಫ್‌ ಭಟ್‌, ಇಸ್ಲಾಮಾಬಾದ್‌ ಮೂಲದ ಸೈಯದ್‌ ಗಜ್ನಾಫರ್‌ ಮತ್ತು ಜಮ್ಮು–ಕಾಶ್ಮೀರದ ನಿವಾಸಿ ನಾಸಿರ್‌ ಅಲಿ ಎಂದು ಗುರುತಿಸಲಾಗಿದೆ. ಮೂವರನ್ನು ಮಹಾರಾಜ್‌ಗಂಜ್‌ ಜಿಲ್ಲೆಯ ಸೊನೌಲಿಯಲ್ಲಿ ಇರುವ ಇಂಡೊ– ನೇಪಾಳ ಗಡಿಯಲ್ಲಿ ಬಂಧಿಸಲಾಗಿದೆ ಎಂದು ಎಟಿಎಸ್‌ ಪ್ರಕಟಣೆ ತಿಳಿಸಿದೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT