ADVERTISEMENT

ಉತ್ತರ ಪ್ರದೇಶ | ರೈಲು ಡಿಕ್ಕಿ–ಇಬ್ಬರು ರೈಲ್ವೆ ನೌಕರರು ಸಾವು, ಮತ್ತೊಬ್ಬರಿಗೆ ಗಾಯ

ಪಿಟಿಐ
Published 1 ಡಿಸೆಂಬರ್ 2023, 7:30 IST
Last Updated 1 ಡಿಸೆಂಬರ್ 2023, 7:30 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

(ಚಿತ್ರ ಕೃಪೆ–ಪಿಟಿಐ)

ಬಾರಾಬಂಕಿ (ಉತ್ತರ ಪ್ರದೇಶ): ಜಹಾಂಗೀರಾಬಾದ್ ರೈಲು ನಿಲ್ದಾಣದ ಬಳಿ ಸಿಗ್ನಲ್ ಸರಿಪಡಿಸುವ ವೇಳೆ ಎದುರಿಗೆ ಬರುತ್ತಿದ್ದ ರೈಲು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ರೈಲ್ವೆ ನೌಕರರು ಮೃತಪಟ್ಟಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಅರವಿಂದ್ ಕುಮಾರ್ (28) ಹಾಗೂ ತಾಲಾ ಸೊರೆನ್ (45) ಮೃತರು. ‌ದೇವಿ ಪ್ರಸಾದ್ (30) ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದಾರೆ. ‌ಗೊಂಡಾ-ಬಾರಾಬಂಕಿ ರೈಲ್ವೆ ವಿಭಾಗದ ಬಳಿ ಗುರುವಾರ ಈ ಘಟನೆ ನಡೆದಿದೆ.

ಸಿಗ್ನಲ್ ಕಂಬವೊಂದರಲ್ಲಿ ದೋಷವನ್ನು ಸರಿಪಡಿಸುತ್ತಿದ್ದಾಗ ಕೊಚ್ಚಿನ್ ಎಕ್ಸ್‌ಪ್ರೆಸ್ ಡಿಕ್ಕಿ ಹೊಡೆ‌ದಿದೆ. ಕುಮಾರ್ ಸ್ಥಳದಲ್ಲೇ ಮೃತಪಟ್ಟಿದ್ದು, ಸೊರೆನ್‌ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಪ್ರಸಾದ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕುಮಾರ್ ಜಹಾಂಗೀರಾಬಾದ್ ರೈಲ್ವೆ ನಿಲ್ದಾಣದಲ್ಲಿ ಎಲೆಕ್ಟ್ರಿಷಿಯನ್ ಆಗಿ, ಸೊರೆನ್ ಸಿಗ್ನಲ್ ಸಹಾಯಕರಾಗಿ ಮತ್ತು ಪ್ರಸಾದ್ ರೈಲ್ವೆಯ ಗುತ್ತಿಗೆ ಉದ್ಯೋಗಿಯಾಗಿದ್ದರು. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಸರ್ಕಾರಿ ರೈಲ್ವೆ ಪೊಲೀಸ್ ಠಾಣೆಯ ಉಸ್ತುವಾರಿ ಧರ್ಮೇಂದ್ರ ಕುಮಾರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.