ADVERTISEMENT

ಪುಣೆ ಪೊಲೀಸರ ಕಾರ್ಯಾಚರಣೆ: ₹20 ಕೋಟಿ ಮೌಲ್ಯದ ಮೆಪೆಡ್ರೊನ್‌ ವಶ

ಪಿಟಿಐ
Published 8 ಅಕ್ಟೋಬರ್ 2020, 8:59 IST
Last Updated 8 ಅಕ್ಟೋಬರ್ 2020, 8:59 IST
ಸಾಂದರ್ಭಿಕ ಚಿತ್ರ 
ಸಾಂದರ್ಭಿಕ ಚಿತ್ರ    

ಪುಣೆ: ಇಲ್ಲಿನ ಶೆಲ್‌ ಪಿಂಪಲಗಾಂವ್‌ ಗ್ರಾಮದ ಸಮೀಪ ಡ್ರಗ್ಸ್‌ ಜಾಲವೊಂದರ ಮೇಲೆ ದಾಳಿ ನಡೆಸಿರುವ ಪಿಂಪ್ರಿ ಚಿಂಚವಾಡ ಪೊಲೀಸರು ₹20 ಕೋಟಿ ಮೌಲ್ಯದ ಮೆಪೆಡ್ರೊನ್‌ ವಶಪಡಿಸಿಕೊಂಡಿದ್ದು, ಐದು ಮಂದಿಯನ್ನು ಬಂಧಿಸಿದ್ದಾರೆ.

‘ಡ್ರಗ್ಸ್‌ ಜಾಲದ ಕುರಿತ ಖಚಿತ ಮಾಹಿತಿಯ ಮೇರೆಗೆ ಬುಧವಾರ ಮಧ್ಯಾಹ್ನ ದಾಳಿ ನಡೆಸಿ ಐದು ಮಂದಿಯನ್ನು ನಮ್ಮ ತಂಡವು ಬಂಧಿಸಿದೆ. ಅವರಿಂದ 20 ಕೆ.ಜಿ. ಮೆಪೆಡ್ರೊನ್ ಹಾಗೂ ಕಾರನ್ನು‌ ವಶಕ್ಕೆ ಪಡೆಯಲಾಗಿದೆ. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್‌ ಹಾಗೂ ಮಾದಕ ವಸ್ತುಗಳು ಹಾಗೂ ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆಯ (ಎನ್‌ಡಿಪಿಎಸ್‌) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಮೆಪೆಡ್ರೊನ್‌ ಅನ್ನು ‘ಮಿಯಾಂವ್‌ ಮಿಯಾಂವ್‌’ ಅಥವಾ ‘ಎಂಡಿ’ ಎಂದೂ ಕರೆಯಲಾಗುತ್ತದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.