ADVERTISEMENT

ರಾಜಸ್ಥಾನ | 2014ರ ಪ್ರಕರಣ: ಕಾಂಗ್ರೆಸ್‌ ಶಾಸಕರು ಸೇರಿ 9 ಮಂದಿಗೆ ಶಿಕ್ಷೆ

ಪಿಟಿಐ
Published 18 ಜೂನ್ 2025, 13:39 IST
Last Updated 18 ಜೂನ್ 2025, 13:39 IST
   

ಜೈಪುರ: ರಾಜಸ್ಥಾನ ವಿಶ್ವವಿದ್ಯಾಲಯದ ಆವರಣದಲ್ಲಿ 11 ವರ್ಷಗಳ ಹಿಂದೆ ರಸ್ತೆ ತಡೆ ನಡೆಸಿದ್ದ ಪ್ರಕರಣದಲ್ಲಿ ಇಬ್ಬರು ಕಾಂಗ್ರೆಸ್‌ ಶಾಸಕರು ಸೇರಿದಂತೆ 9 ಮಂದಿಗೆ ಜೈಪುರದ ನ್ಯಾಯಾಲಯವೊಂದು ಬುಧವಾರ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಪರೀಕ್ಷಿತ ದೇತಾ ಅವರು, 9 ಜನರನ್ನು ತಪ್ಪಿತಸ್ಥರು ಎಂದು ಪರಿಗಣಿಸಿ ಅವರಿಗೆ 1 ವರ್ಷ ಜೈಲು ಶಿಕ್ಷೆಯ ಜೊತೆ ತಲಾ ₹3,200 ದಂಡ ವಿಧಿಸಿದ್ದಾರೆ. 

ರಾಜಸ್ಥಾನ ವಿ.ವಿಯ ಮುಖ್ಯದ್ವಾರದ ಹೊರಗೆ ವಿದ್ಯಾರ್ಥಿ ನಾಯಕರು 2014 ಆಗಸ್ಟ್ 13ರಂದು 20 ನಿಮಿಷ ರಸ್ತೆ ತಡೆ ನಡೆಸಿದ್ದರು. ತಪ್ಪಿತಸ್ಥರಲ್ಲಿ ಮುಕೇಶ್‌ ಭಾಸ್ಕರ್‌ ಮತ್ತು ಮನಿಷ್‌ ಯಾದವ್‌ ಅವರು ಪ್ರಸ್ತುತ ಶಾಸಕರಾಗಿದ್ದಾರೆ. ಅಭಿಷೇಕ್‌ ಚೌಧರಿ ಅವರು 2023ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.