ADVERTISEMENT

ಕರುಣಾನಿಧಿ ಅನಾರೋಗ್ಯದ ಆಘಾತದಿಂದ 21 ಕಾರ್ಯಕರ್ತರು ಸಾವಿಗೀಡಾಗಿದ್ದಾರೆ: ಸ್ಟಾಲಿನ್

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2018, 2:43 IST
Last Updated 2 ಆಗಸ್ಟ್ 2018, 2:43 IST
   

ಚೆನ್ನೈ: ಪಕ್ಷದ ಮುಖ್ಯಸ್ಥ ಕರುಣಾನಿಧಿ ಅವರ ಅನಾರೋಗ್ಯ ವಿಚಾರದ ಆಘಾತದಿಂದಾಗಿ 21 ಕಾರ್ಯಕರ್ತರು ಮೃತಪಟ್ಟಿದ್ದಾರೆ ಎಂದು ಡಿಎಂಕೆ ಕಾರ್ಯಾಧ್ಯಕ್ಷ ಎಂ.ಕೆ. ಸ್ಟಾಲಿನ್‌ ಹೇಳಿದ್ದಾರೆ.

ಬುಧವಾರ ರಾತ್ರಿ ಅವರ ಆರೋಗ್ಯ ವಿಚಾರಿಸಿಕೊಂಡು ಆಸ್ಪತ್ರೆಯಿಂದ ಹೊರಬಂದ ಸ್ಟಾಲಿನ್‌,‘ವೈದ್ಯರ ಒಂದು ತಂಡ ನಿರಂತರವಾಗಿ ನಿಗಾ ವಹಿಸಿದ್ದು, ಆರೋಗ್ಯ ಸಹಜ ಸ್ಥಿತಿಗೆ ಮರಳುತ್ತಿದೆ’ ಎಂದಿದ್ದಾರೆ.

ಇಲ್ಲಿನ ಖಾಸಗಿ ಆಸ್ಪತ್ರೆಗೆ ಕರುಣಾನಿಧಿ ಅವರನ್ನು ದಾಖಲಿಸಲಾಗಿದ್ದು, ಸತತ ಆರನೇ ದಿನವೂ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿದಿದೆ.

ADVERTISEMENT

‘ಕರುಣಾನಿಧಿ ಅನಾರೋಗ್ಯದ ಸುದ್ದಿಯನ್ನು ಅರಗಿಸಿಕೊಳ್ಳಲಾಗದೆಪಕ್ಷದ 21 ಕಾರ್ಯಕರ್ತರು ಸಾವಿಗೀಡಾಗಿರುವುದು ಬಹಳ ನೋವು ತಂದಿದೆ. ಮುಖ್ಯಮಂತ್ರಿಗಳಅನಾರೋಗ್ಯದ ವಿಚಾರವಾಗಿ ಜನರು ಯಾವುದೇ ರೀತಿಯ ದುಡುಕಿನ ತೀರ್ಮಾನ ಕೈಗೊಳ್ಳಬಾರದು’ ಎಂದು ಮನವಿ ಮಾಡಿದ್ದಾರೆ.

ಕರುಣಾನಿಧಿ ಅವರಿಗೆ ಸದ್ಯ 94 ವರ್ಷ ವಯಸ್ಸಾಗಿದೆ. ಅವರ ಉತ್ತರಾಧಿಕಾರಿಯಾಗಲಿರುವ ಮಗ ಸ್ಟಾಲಿನ್‌ ’ಪಕ್ಷ ಒಬ್ಬ ಕಾರ್ಯಕರ್ತರ ಸಾವನ್ನೂ ಸಹಿಸಿಕೊಳ್ಳಲಾಗದು’ ಎಂದೂ ಹೇಳಿಕೊಂಡಿದ್ದಾರೆ.

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಮಂಗಳವಾರ ಆಸ್ಪತ್ರೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದ್ದರು.

ಇದನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.