ADVERTISEMENT

ಬ್ಯಾಂಕ್ ದರೋಡೆಗೆ ಯತ್ನಿಸಿದ ಮೂವರು ಡಕಾಯಿತರನ್ನು ಗುಂಡಿಕ್ಕಿ ಕೊಂದ ಪೊಲೀಸರು

ಪಿಟಿಐ
Published 22 ಆಗಸ್ಟ್ 2021, 10:52 IST
Last Updated 22 ಆಗಸ್ಟ್ 2021, 10:52 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಗುವಾಹಟಿ: ಬ್ಯಾಂಕ್‌ ದರೋಡೆಗೆ ಯತ್ನಿಸಿದ ಮೂವರು ದರೋಡೆಕೋರರನ್ನು ಪೊಲೀಸರು ಗುಂಡಿಕ್ಕಿ ಕೊಂದಿರುವ ಘಟನೆ ಅಸ್ಸಾಂನ ಕೊಕ್ರಜಾರ್ ಜಿಲ್ಲೆಯ ಚಂಗಮಾರಿ ಬಳಿಯ ಬೋತ್‌ಗಾನ್‌ ಎಂಬಲ್ಲಿ ಶನಿವಾರ ತಡರಾತ್ರಿ ನಡೆದಿದೆ.

ಶಸ್ತ್ರಾಸ್ತ್ರ ಹಾಗೂ ಸಲಕರಣೆಗಳೊಂದಿಗೆ ಬ್ಯಾಂಕ್‌ ದರೋಡೆಗೆ ಬಂದ ಡಕಾಯಿತರು ಪೊಲೀಸರನ್ನು ಕಂಡು ಗುಂಡಿನ ದಾಳಿ ನಡೆಸಿದ್ದರು. ಇದಕ್ಕೆ ಪ್ರತಿಯಾಗಿ ಪೊಲೀಸರು ಸಹ ಗುಂಡಿನ ದಾಳಿ ನಡೆಸಿ ಮೂವರು ಡಕಾಯಿತರನ್ನು ಹೊಡೆದುರುಳಿಸಿದ್ದಾರೆ. ಕಾರ್ಯಾಚರಣೆ ಮಧ್ಯರಾತ್ರಿವರೆಗೂ ನಡೆದಿತ್ತು ಎಂದು ಅಸ್ಸಾಂ ಡಿಜಿಪಿ ಭಾಸ್ಕರಜ್ಯೋತಿ ಮಹಾಂತ್ ತಿಳಿಸಿದ್ದಾರೆ.

ಅತಿದೊಡ್ಡ ಬ್ಯಾಂಕ್‌ ದರೋಡೆಯನ್ನು ತಡೆಗಟ್ಟಿರುವ ಅಸ್ಸಾಂ ಪೊಲೀಸರ ಕೆಲಸವನ್ನು ಮುಖ್ಯಮಂತ್ರಿ ಹೇಮಂತ ಬಿಸ್ವ ಶರ್ಮಾ ಶ್ಲಾಘಿಸಿದ್ದಾರೆ ಎಂದು ಡಿಜಿಪಿ ತಿಳಿಸಿದ್ದಾರೆ.

ADVERTISEMENT

‘ತಾಲಿಬಾನ್ ಪರ ಘೋಷಣೆಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಮೊಳಗಿಸಿದ್ದ 15 ಅಸ್ಸಾಂ ಪ್ರಜೆಗಳನ್ನು ಪೊಲೀಸರು ನಿನ್ನೆಯಷ್ಟೇ ಬಂದಿಸಿದ್ದರು. ಅಸ್ಸಾಂ ಅನ್ನುಅಪರಾಧ ಮುಕ್ತ ಮಾಡುವುದೇ ನಮ್ಮ ಗುರಿ‘ ಎಂದು ಹಿಮಾಂತ್ ಬಿಸ್ವಾಸ್ ಶರ್ಮಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.