ADVERTISEMENT

ಜೈಪುರ | ನೀಟ್‌ ಅಭ್ಯರ್ಥಿಗೆ ₹40 ಲಕ್ಷ ವಂಚಿಸಲು ಯತ್ನ: ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 4 ಮೇ 2025, 14:03 IST
Last Updated 4 ಮೇ 2025, 14:03 IST
<div class="paragraphs"><p>ಜೈಪುರ | ನೀಟ್‌ ಅಭ್ಯರ್ಥಿಗೆ ₹40 ಲಕ್ಷ ವಂಚಿಸಲು ಯತ್ನ: ಮೂವರ ಬಂಧನ</p></div>

ಜೈಪುರ | ನೀಟ್‌ ಅಭ್ಯರ್ಥಿಗೆ ₹40 ಲಕ್ಷ ವಂಚಿಸಲು ಯತ್ನ: ಮೂವರ ಬಂಧನ

   

ಜೈಪುರ: ನೀಟ್‌ ಅಭ್ಯರ್ಥಿಗೆ ಪ್ರಶ್ನೆಪತ್ರಿಕೆ ನೀಡುವುದಾಗಿ ಆಶ್ವಾಸನೆ ನೀಡಿ ₹40 ಲಕ್ಷ ವಂಚಿಸಲು ಯತ್ನಿಸಿದ ಆರೋಪದಲ್ಲಿ ಮೂವರನ್ನು ರಾಜಸ್ಥಾನ ಪೊಲೀಸ್‌ ವಿಶೇಷ ಕಾರ್ಯ ಪಡೆಯು ಬಂಧಿಸಿದೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದರು.

ಆರೋಪಿಗಳನ್ನು ಬಲ್ವಾನ್‌ (27), ಮುಕೇಶ್‌ ಮೀನಾ (40), ಹರ್ದಾಸ್‌ (38) ಎಂದು ಗುರುತಿಸಲಾಗಿದೆ.

ADVERTISEMENT

ಮೂವರು ಆರೋಪಿಗಳು ಶುಕ್ರವಾರ ವಿದ್ಯಾರ್ಥಿ ಮತ್ತು ಕುಟುಂಬದ ಸದಸ್ಯರನ್ನು ಗುರುಗ್ರಾಮಕ್ಕೆ ಕರೆದುಕೊಂಡು ಹೋಗಿ ಹಣ ಕೇಳಿದ್ದರು. ವಿದ್ಯಾರ್ಥಿ ಕುಟುಂಬವು  ಪ್ರಶ್ನೆಪತ್ರಿಕೆ ನೀಡುವಂತೆ  ಕೇಳಿತ್ತು. ಪ್ರಶ್ನೆಪತ್ರಿಕೆ ನೀಡಲು ನಿರಾಕರಿಸಿದಾಗ ಅವರು ಪೊಲೀಸರಿಗೆ ವಿಷಯ ತಿಳಿಸಿದ್ದರು. ನಂತರ ಪೊಲೀಸರು ಅವರನ್ನು  ಶನಿವಾರ ಬಂಧಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.