ADVERTISEMENT

ರಾಜಸ್ಥಾನ: ಕೀಟನಾಶಕ ಇರುವ ಟೀ ಕುಡಿದು ಒಂದೇ ಕುಟುಂಬದ 3 ಮಂದಿ ಸಾವು

ಪಿಟಿಐ
Published 9 ಡಿಸೆಂಬರ್ 2024, 12:50 IST
Last Updated 9 ಡಿಸೆಂಬರ್ 2024, 12:50 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಜೈಪುರ: ರಾಜಸ್ಥಾನದ ಬನ್ಸ್ವಾರಾ ಜಿಲ್ಲೆಯಲ್ಲಿ ಕೀಟನಾಶಕವನ್ನು ಒಳಗೊಂಡಿರುವ ಚಹಾವನ್ನು ಸೇವಿಸಿ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕುಟುಂಬ ಸದಸ್ಯರೊಬ್ಬರು ಆಕಸ್ಮಿಕವಾಗಿ ಟೀಗೆ ಕೀಟನಾಶಕ ಸೇರಿಸಿದ್ದರಿಂದ ಈ ಘಟನೆ ಸಂಭವಿಸಿದೆ ಎಂದು ಅಂಬಾಪುರ ಪೋಲಿಸ್‌ ಠಾಣೆಯ ಎಸ್‌ಎಚ್‌ಒ ರಾಮಸ್ವರೂಪ್ ಮೀನಾ ಹೇಳಿದ್ದಾರೆ.

ADVERTISEMENT

ಟೀ ಸೇವಿಸಿದ ಬಳಿಕ ಕುಟುಂಬಸ್ಥರು ಮತ್ತು ಅವರ ನೆರೆಹೊರೆಯವರ ಒಬ್ಬರು ವಾಂತಿ ಮಾಡಿಕೊಳ್ಳಲು ಪ್ರಾರಂಭಿಸಿದರು. ತಕ್ಷಣ ಅವರನ್ನು ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಯಿತು. ಬಳಿಕ ಉದಯಪುರದ ಎಂಬಿ ಸರ್ಕಾರಿ ಆಸ್ಪತ್ರೆಗೆ ಕೊಂಡ್ಯೊಯಲಾಯಿತು ಎಂದು ಅವರು ತಿಳಿಸಿದ್ದಾರೆ.

ಘಟನೆಯಲ್ಲಿ ದರಿಯಾ, ಅವರ ಸೊಸೆ ಚಂದಾ ಮತ್ತು ಚಂದಾ ಅವರ ಮಗ ಅಕ್ಷಯ್ ಮತೃಪಟ್ಟಿದ್ದಾರೆ. ದರಿಯಾ ಅವರ ಮಾವ, ಚಂದಾ ಅವರ ಪತಿ ಮತ್ತು ಪಕ್ಕದ ಮನೆಯವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐಸಿಯುನಲ್ಲಿದ್ದಾರೆ ಎಂದು ಮೀನಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.