ADVERTISEMENT

ಜಮ್ಮು-ಕಾಶ್ಮೀರ: ಮೂವರು ಉಗ್ರರ ಹತ್ಯೆ -ಕಾಶ್ಮೀರ ಐಜಿಪಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಜುಲೈ 2021, 7:40 IST
Last Updated 25 ಜುಲೈ 2021, 7:40 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬಂಡಿಪೋರಾ: ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾದಲ್ಲಿ ಸೇನಾ ಪಡೆಗಳು ಶನಿವಾರನಡೆಸಿದ ಎನ್‌ಕೌಂಟರ್‌ ವೇಳೆ ಲಷ್ಕರ್‌-ಇ-ತಯಬಾ ಸಂಘಟನೆಯ ಮೂವರು ಉಗ್ರರು ಹತ್ಯೆಯಾಗಿದ್ದಾರೆ.

ಕಾಶ್ಮೀರ ವಲಯದ ಐಜಿಪಿ ವಿಜಯ್‌ ಕುಮಾರ್‌ಈ ಬಗ್ಗೆ ಮಾಹಿತಿ ನೀಡಿದ್ದು, ʼಬಂಡಿಪೋರಾ ಎನ್‌ಕೌಂಟರ್‌ನಲ್ಲಿ ಸ್ಥಳೀಯಲಷ್ಕರ್‌-ಇ-ತಯಬಾ (ಎಲ್‌ಇಟಿ) ಉಗ್ರ ಶಕೀರ್‌ ಸೇರಿದಂತೆ ಒಟ್ಟು ಮೂವರು ಹತ್ಯೆಯಾಗಿದ್ದಾರೆ. ಮೂವರೂಎಲ್‌ಇಟಿಗೆ ಸೇರಿದವರಾಗಿದ್ದಾರೆ. ಶಕೀರ್‌,2018ರಲ್ಲಿ ಅಮೃತಸರದಲ್ಲಿನ ವಾಘಾ ಗಡಿ ಮೂಲಕ ಪಾಕಿಸ್ತಾನಕ್ಕೆ ತೆರಳಿದ್ದʼ ಎಂದು ತಿಳಿಸಿದ್ದಾರೆ.

ʼಬಂಡಿಪೋರಾದ ಶೋಕಬಾಬ ಅರಣ್ಯದಲ್ಲಿ ಮೂವರು ಉಗ್ರರು ಇರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು.‌ ಅದರಂತೆ ಶೋಧ ಕಾರ್ಯಾಚರಣೆ ಆರಂಭಿಸಿದೆವು. ಇದಾದ ಕೆಲ ಹೊತ್ತಿನಲ್ಲೇ ಅವರು (ಉಗ್ರರು) ಗುಂಡಿನ ದಾಳಿ ಆರಂಭಿಸಿದರು. ಈ ವೇಳೆ ಒಬ್ಬ ಯೋಧ ಗಾಯಗೊಂಡಿದ್ದು,ಇದೀಗ ಚೇತರಿಸಿಕೊಳ್ಳುತ್ತಿದ್ದಾರೆʼ ಎಂದಿದ್ದಾರೆ.

ADVERTISEMENT

ಮುಂದುವರಿದು,ʼಈ ಪ್ರದೇಶದಲ್ಲಿ ಇನ್ನೂ ಇಬ್ಬರು ಅಥವಾ ಮೂವರು ಉಗ್ರರು ಇರುವ ಶಂಕೆ ಇದೆʼ ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.