ADVERTISEMENT

ರಾಂಚಿ: ಹಬ್ಬಾಚರಣೆಗೆ ತೆರಳುತ್ತಿದ್ದ ಮೂವರು ಮಹಿಳೆಯರು ಅಪಘಾತದಲ್ಲಿ ಸಾವು

ಪಿಟಿಐ
Published 15 ಏಪ್ರಿಲ್ 2024, 4:23 IST
Last Updated 15 ಏಪ್ರಿಲ್ 2024, 4:23 IST
<div class="paragraphs"><p>ಸಾವು (ಸಾಂಕೇತಿಕ ಚಿತ್ರ)</p></div>

ಸಾವು (ಸಾಂಕೇತಿಕ ಚಿತ್ರ)

   

ರಾಂಚಿ: ಜಾರ್ಖಂಡ್‌ನ ರಾಂಚಿ ಜಿಲ್ಲೆಯಲ್ಲಿ ಸೋಮವಾರ ಬೆಳಿಗ್ಗೆ ಪಿಕ್‌ ಅಪ್ ಹಾಗೂ ಟ್ರ್ಯಾಕ್ಟರ್‌ ನಡುವೆ ನಡೆದ ಅಪಘಾತದಲ್ಲಿ ಮೂವರು ಮಹಿಳೆಯರು ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಿಕ್‌ ಅಪ್‌ ವಾಹನದಲ್ಲಿ ಮಹಿಳೆಯರು ಪ್ರಯಾಣಿಸುತ್ತಿದ್ದರು. ಟ್ರಾಕ್ಟರ್‌ನೊಂದಿಗೆ ಮುಖಾಮುಖಿಯಾಗಿ ಪಿಕ್‌ ಅಪ್‌ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ರುತು ಚೆಟ್ಟಿ ಪ್ರದೇಶದಲ್ಲಿ ಘಟನೆ ನಡೆದಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ADVERTISEMENT

ಚೈತಿ ಛತ್‌ ಹಬ್ಬದ ಅಂಗವಾಗಿ ನದಿಯೊಂದರಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಲು ಈ ಮಹಿಳೆಯರು ತೆರಳುತ್ತಿದ್ದರು ಎಂದು ರುತು ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್‌ ಶಶಿಭೂಷಣ್ ಚೌಧರಿ ತಿಳಿಸಿದ್ದಾರೆ.

ಮೂವರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.