ADVERTISEMENT

ಈರೋಡ್‌: 30 ಸಾವಿರ ವಿದ್ಯುತ್‌ ಮಗ್ಗಗಳ ಕಾರ್ಯಾಚರಣೆ ಸ್ಥಗಿತ

ಪಿಟಿಐ
Published 7 ಫೆಬ್ರುವರಿ 2021, 12:07 IST
Last Updated 7 ಫೆಬ್ರುವರಿ 2021, 12:07 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಈರೋಡ್‌ (ತಮಿಳುನಾಡು): ರೇಯಾನ್ ಬಟ್ಟೆಯ ಬೆಲೆ ಏರಿಕೆಯನ್ನು ವಿರೋಧಿಸಿ ಇದೇ 11 ರಿಂದ 11 ದಿನಗಳವರೆಗೆ ಇಲ್ಲಿಯ 30 ಸಾವಿರ ವಿದ್ಯುತ್ ಮಗ್ಗಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ವಿದ್ಯುತ್‌ ಮಗ್ಗಗಳ ತಯಾರಕರ ಸಂಘದ ಸಂಯೋಜಕ ಕಡವೇಲ್ ಭಾನುವಾರ ತಿಳಿಸಿದ್ದಾರೆ.

ಪ್ರಸ್ತುತ, ಒಂದು ಕೆ.ಜಿ ರೇಯಾನ್ ನೂಲು ₹ 250ಗೆ ಮಾರಾಟವಾಗುತ್ತಿದ್ದು, ಇದು ಕಳೆದ ಡಿಸೆಂಬರ್‌ನಲ್ಲಿದ್ದ ದರಕ್ಕೆ ಹೋಲಿಸಿದರೆ ಶೇಕಡ 25 ರಷ್ಟು ಹೆಚ್ಚಳವಾಗಿದೆ ಎಂದು ಅವರು ಹೇಳಿದರು.

ಬೆಲೆ ಏರಿಕೆಯಿಂದಾಗಿ, ನೂಲನ್ನು ಮಾರಾಟ ಮಾಡಲು ಸಾಧ್ಯವಾಗದೇ ನೇಕಾರರ ಬಳಿಯೇ ಉಳಿದುಕೊಂಡಿದೆ. ಒಂದು ಮೀಟರ್ ರೇಯಾನ್ ಬಟ್ಟೆಯ ಉತ್ಪಾದನಾ ವೆಚ್ಚ₹ 38 ಆಗುತ್ತದೆ. ಆದರೆ ಖರೀದಿದಾರರು ಮೀಟರ್‌ಗೆ ಕೇವಲ ₹ 32 ಕೊಡುತ್ತಾರೆ. ಬೆಲೆ ಏರಿಕೆಯನ್ನು ವಿರೋಧಿಸಿ ನೇಕಾರರು, ಫ್ಯಾಕ್ಟರಿಗಳನ್ನು ಮುಚ್ಚುವ ಮೂಲಕ ಕಳೆದ ಡಿಸೆಂಬರ್‌ನಲ್ಲಿ ಪ್ರತಿಭಟನೆ ನಡೆಸಿದ್ದರು. ಆದರೆ, ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಅವರು ಆರೋಪಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.