ಮುಂಬೈ: ಆರ್‌ಟಿಜಿಎಸ್ ಅಥವಾ ಎನ್‌ಇಎಫ್‌ಟಿ ಮೂಲಕ ಯಾವ ಬ್ಯಾಂಕ್ ಖಾತೆಗೆ ಹಣ ಪಾವತಿ ಮಾಡುತ್ತೇವೆಯೊ ಆ ಬ್ಯಾಂಕ್ ಖಾತೆಯ ಹೆಸರನ್ನು ಪರಿಶೀಲಿಸಿಕೊಳ್ಳಲು ಅನುಕೂಲವಾಗುವಂತೆ ವ್ಯವಸ್ಥೆಯೊಂದನ್ನು ರೂಪಿಸುವಂತೆ ರಾಷ್ಟ್ರೀಯ ಪಾವತಿ ನಿಗಮಕ್ಕೆ ಆರ್‌ಬಿಐ ಸೋಮವಾರ ಸೂಚನೆ ನೀಡಿದೆ.
‘2025ರ ಏಪ್ರಿಲ್ 1ರ ಒಳಗೆ ಈ ವ್ಯವಸ್ಥೆಯನ್ನು ಜಾರಿಗೆ ತರಬೇಕು. ಯುಪಿಐ ಮತ್ತು ಐಎಂಪಿಎಸ್ ಮೂಲಕ ಹಣ ಕಳುಹಿಸುವಾಗ ಯಾರಿಗೆ ಪಾವತಿ ಮಾಡುತ್ತೇವೆಯೊ ಅವರ ಹೆಸರನ್ನು ಮರುಪರಿಶೀಲಿಸಿಕೊಳ್ಳುವ ವ್ಯವಸ್ಥೆ ಇದೆ. ಇಂಥದ್ದೆ ವ್ಯವಸ್ಥೆ ರೂಪಿಸಿ. ಇದರಿಂದ ಯಾವುದೋ ಖಾತೆ ಹಣ ವರ್ಗಾವಣೆಯಾಗುವುದನ್ನು ತಡೆಯಬಹುದು’ ಎಂದು ಆರ್‌ಬಿಐ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.