ADVERTISEMENT

ಮೂರು ವರ್ಷಗಳಲ್ಲಿ ಪೌರತ್ವ ತೊರೆದ 3.92 ಲಕ್ಷ ಭಾರತೀಯರು

ಪಿಟಿಐ
Published 19 ಜುಲೈ 2022, 11:02 IST
Last Updated 19 ಜುಲೈ 2022, 11:02 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ:ಕಳೆದ ಮೂರು ವರ್ಷಗಳಲ್ಲಿ 3.92 ಲಕ್ಷಕ್ಕೂ ಹೆಚ್ಚು ಭಾರತೀಯರು, ದೇಶದ ಪೌರತ್ವವನ್ನು ತ್ಯಜಿಸಿದ್ದಾರೆ. ಇವರಲ್ಲಿ 1.70 ಲಕ್ಷ ಜನರು ಅಮೆರಿಕದ ಪೌರತ್ವ ಪಡೆದಿದ್ದಾರೆ.

‘ವೈಯಕ್ತಿಕ ಕಾರಣಗಳಿಗಾಗಿ ಪೌರತ್ವವನ್ನು ತೊರೆದ ಭಾರತೀಯರು, 120 ವಿವಿಧ ದೇಶಗಳ ಪೌರತ್ವ ಪಡೆದುಕೊಂಡಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ’ ಎಂದು ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್‌ ಮಂಗಳವಾರ ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

‘2019ರಿಂದ 2021ವರೆಗೆ 3,92,643 ಭಾರತೀಯರು ಪೌರತ್ವ ತೊರೆದಿದ್ದಾರೆ. ಇವರಲ್ಲಿ1,70,795 ಮಂದಿ ಅಮೆರಿಕದ ಪೌರತ್ವ ಪಡೆದುಕೊಂಡಿದ್ದಾರೆ. 64,071 ಮಂದಿ ಕೆನಡಾ, 58,391 ಮಂದಿ ಆಸ್ಟ್ರೇಲಿಯಾ, 35,435 ಮಂದಿ ಬ್ರಿಟನ್‌, 12,131 ಮಂದಿ ಇಟಲಿ, 8,882 ಮಂದಿ ನ್ಯೂಜಿಲೆಂಡ್‌, 7,046 ಮಂದಿ ಸಿಂಗಪುರ, 6,690 ಮಂದಿ ಜರ್ಮನಿ, 3,754 ಮಂದಿ ಸ್ವೀಡನ್‌ ಮತ್ತು 48 ಮಂದಿ ಪಾಕಿಸ್ತಾನದ ಪೌರತ್ವ ಪಡೆದಿದ್ದಾರೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.