ADVERTISEMENT

ಜಾರ್ಖಂಡ್ ವಿಧಾನಸಭೆಯಲ್ಲಿ ಗದ್ದಲ: ನಾಲ್ವರು ಬಿಜೆಪಿ ಶಾಸಕರ ಅಮಾನತು

ಪಿಟಿಐ
Published 2 ಆಗಸ್ಟ್ 2022, 14:04 IST
Last Updated 2 ಆಗಸ್ಟ್ 2022, 14:04 IST

ರಾಂಚಿ (ಪಿಟಿಐ): ಭ್ರಷ್ಟಾಚಾರದ ಕುರಿತು ಚರ್ಚಿಸಲು ಅವಕಾಶ ನೀಡಬೇಕು ಎಂದು ಗದ್ದಲ ಎಬ್ಬಿಸಿದ ಬಿಜೆಪಿಯ ನಾಲ್ವರು ಶಾಸಕರನ್ನುಆಗಸ್ಟ್‌ 4ರವರೆಗೆ ಸ್ಪೀಕರ್‌ ರವೀಂದ್ರನಾಥ್‌ ಮಹತೊ ಮಂಗಳವಾರ ಅಮಾನತು ಮಾಡಿದ್ದಾರೆ. ಜಾರ್ಖಂಡ್ ವಿಧಾನಸಭೆ‌ಯ ಮುಂಗಾರು ಅಧಿವೇಶನವು ಆಗಸ್ಟ್ 5ಕ್ಕೆ ಮುಕ್ತಾಯವಾಗಲಿದೆ.

ವಿಧಾನಸಭೆಯಲ್ಲಿ ಅಶಿಸ್ತಿನಿಂದ ನಡೆದುಕೊಂಡಿದ್ದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ.

ಬೆಳಿಗ್ಗೆ 11ಕ್ಕೆ ಅಧಿವೇಶನ ಪ್ರಾರಂಭವಾಗುತ್ತಿದ್ದಂತೆಯೇ ವಿಧಾನಸಭೆಯ ಬಾವಿಗಿಳಿದ ಬಿಜೆಪಿ ಶಾಸಕರು, ಜೆಎಂಎಂ ನೇತೃತ್ವದ ರಾಜ್ಯ ಸರ್ಕಾರವು ಮರಳು, ಕಲ್ಲಿದ್ದಲು ಲೂಟಿಯಲ್ಲಿ ತೊಡಗಿದೆ. ಆದ್ದರಿಂದಭ್ರಷ್ಟಾಚಾರದ ಕುರಿತು ಚರ್ಚಿಸಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು. ಮುಖ್ಯಮಂತ್ರಿ ಹೇಮಂತ್‌ ಸೊರೇನ್‌ ಅವರು ರಾಜೀನಾಮೆ ನೀಡಬೇಕು ಎಂದೂ ಒತ್ತಾಯಿಸಿದರು.

ADVERTISEMENT

‘ನೀವು ಮುಖ್ಯಮಂತ್ರಿಯ ರಾಜೀನಾಮೆಗಾಗಿ ಒತ್ತಾಯಿಸುತ್ತಿದ್ದೀರಿ. ಯಾವುದೇ ವಿಷಯದ ಕುರಿತು ಚರ್ಚೆ ನಡೆಯಬೇಕು ಎಂದಾದರೆ ಅದಕ್ಕೊಂದು ಪ್ರಕ್ರಿಯೆ ಇದೆ’ ಎಂದು ಸ್ಪೀಕರ್‌ ಹೇಳಿದರು. ಆ ಬಳಿಕವೂ ಬಿಜೆಪಿ ಶಾಸಕರು ಗದ್ದಲ ಎಬ್ಬಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.